ಕಡಬ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನೇತ್ರಾವತಿ ತುಳು ಕೂಟ ರಾಮಕುಂಜ (ರಿ.) ಮತ್ತು ತೆಗ್ ರ್ ತುಳುಕೂಟ ನೂಜಿಬಾಳ್ತಿಲ (ರಿ.) ಇವರ ಸಹಯೋಗದಲ್ಲಿ ‘ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನ’ವನ್ನು ದಿನಾಂಕ 20 ಮತ್ತು 21 ಡಿಸೆಂಬರ್ 2025ರಂದು ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 20 ಡಿಸೆಂಬರ್ 2025ರಂದು ಸಂಜೆ 4-00 ಗಂಟೆಗೆ ‘ತುಳುವಪ್ಪೆನ ನೇರೋಣಿಗೆ’ ಉದ್ಘಾಟನೆ ನಡೆಯಲಿದೆ. ದಿನಾಂಕ 21 ಡಿಸೆಂಬರ್ 2025ರಂದು ಬೆಳಗ್ಗೆ 9-00 ಗಂಟೆಗೆ ರಾಷ್ಟ್ರ ಧ್ವಜ, ನಾಡ ಧ್ವಜ ಮತ್ತು ತುಳು ಧ್ವಜಾರೋಹಣ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರಿಂದ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಸೇಸಪ್ಪ ರೈ ರಾಮಕುಂಜ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.
11-00 ಗಂಟೆಗೆ ಜನಪದ ಮೂಲ ಕುಣಿತ – ಕನ್ಯಾಪು ಬೊಕ್ಕ ಮಾದಿರ ನಲಿಕೆ, 11-10ಕ್ಕೆ ವಿಚಾರಗೋಷ್ಠಿ – ಗೇನದ ನಡೆ ಇದರ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರು ವಹಿಸಲಿದ್ದಾರೆ. ಶ್ರೀಮತಿ ಸರಿತಾ ಜನಾರ್ದನ್ ಮತ್ತು ಶ್ರೀಮತಿ ಅಕ್ಷತಾ ಶೇಖರ್ ಇವರ ‘ಗೇನದ ಗುಂಡೊಡು ಬರವುದ ಬೊಲ್ಪು’ ಪುಸ್ತಕ ಬಿಡುಗಡೆಗೊಳ್ಳಲಿದೆ. ಗಂಟೆ 11-50ಕ್ಕೆ ಜನಪದ ಮೂಲ ಕುಣಿತ – ‘ಕರಂಗೋಲು’, 12-00 ಗಂಟೆಗೆ ‘ಕಬಿ ಬೊಕ್ಕ ಕಥಾಗೋಷ್ಠಿ’ ಲೇಖಕಿ ಶ್ರೀಮತಿ ಅಕ್ಷತಾರಾಜ್ ಪೆರ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. 12-40 ಗಂಟೆಗೆ ಜನಪದ ಮೂಲ ಕುಣಿತ – ‘ಕಂಗೀಲು’. 2-00 ಗಂಟೆಗೆ ‘ತುಳು ಬುಳೆಚ್ಚಿಲ್ ಡ್ ತುಳುನಾಡ್ : ಕೋಡೆ-ಇನಿ-ಎಲ್ಲೆ’ ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ಸಂಜೆ ಗಂಟೆ 3-45ಕ್ಕೆ ಜನಪದ ಮೂಲ ಕುಣಿತ – ಚೆನ್ನು ಕುಣಿತ ಮತ್ತು 4-00 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಜನಪದ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ.

