ಮಂಗಳೂರು : ಮಂಗಳೂರಿನ ಕದ್ರಿ ದೇವಸ್ಥಾನದ ಆವರಣದಲ್ಲಿರುವ ‘ಕದಳಿ ಕಲಾ ಕೇಂದ್ರ’ ಇದರ ವತಿಯಿಂದ ‘ಕದಳಿ ದಶಾಹ’ ಮಕ್ಕಳ ಹಾಗೂ ಯುವ ತಂಡಗಳಿಂದ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 03 ಅಕ್ಟೋಬರ್ 2024ರಿಂದ 12 ಅಕ್ಟೋಬರ್ 2024ರವರೆಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 03 ಅಕ್ಟೋಬರ್ 2024ರಂದು ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಮೂಡಬಿದರೆಯ ಶ್ರೀಪತಿ ಭಟ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ಉಡುಪಿ ಜಿಲ್ಲೆಯ ಪುತ್ತೂರಿನ ಶ್ರೀ ಭಗವತೀ ಯಕ್ಷ ಕಲಾ ಬಳಗ (ರಿ.) ಇವರಿಂದ ‘ನರಕಾಸುರ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 04 ಅಕ್ಟೋಬರ್ 2024ರಂದು ಉಡುಪಿ ಜಿಲ್ಲೆಯ ಎಲ್ಲೂರಿನ ಶ್ರೀ ಪಂಚಾಕ್ಷರೀ ಮಕ್ಕಳ ಮೇಳ ಇವರಿಂದ ‘ಸ್ವಯಂ ಪ್ರಭಾ ಪರಿಣಯ’, ದಿನಾಂಕ 05 ಅಕ್ಟೋಬರ್ 2024ರಂದು ಕಾರ್ಕಳ ಲಕ್ಷ್ಮೀಪುರದ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ಯಕ್ಷಗಾನ ಮಂಡಳಿಯವರಿಂದ ‘ದಕ್ಷ ಯಜ್ಞ’, ದಿನಾಂಕ 06 ಅಕ್ಟೋಬರ್ 2024ರಂದು ಪುತ್ತೂರಿನ ಬಾಲವನದ ಶ್ರೀ ದೇವಿ ಮಹಿಳಾ ಯಕ್ಷ ತಂಡ ಇವರಿಂದ ‘ಶಶಿಪ್ರಭಾ ಪರಿಣಯ’ ಮತ್ತು ಪೇಜಾವರ ಪೊರ್ಕೊಡಿಯ ಯಕ್ಷಮಿತ್ರರು (ರಿ.) ಇವರಿಂದ ‘ಶ್ರೀ ರಾಮ ಚರಿತಾಮೃತಂ’, ದಿನಾಂಕ 07 ಅಕ್ಟೋಬರ್ 2024ರಂದು ಉರ್ವದ ಯಕ್ಷರಾಧನಾ ಕಲಾಕೇಂದ್ರ (ರಿ.) ಇವರಿಂದ ‘ರತಿ ಕಲ್ಯಾಣ’, ದಿನಾಂಕ 08 ಅಕ್ಟೋಬರ್ 2024ರಂದು ಮಂಗಳೂರಿನ ಶ್ರೀ ನಾಗಬ್ರಹ್ಮ ಯಕ್ಷ ಕಲಾ ಕೇಂದ್ರ ಕೋಡಿಕಲ್ ಇವರಿಂದ ‘ಇಂದ್ರಜಿತು ಕಾಳಗ’, ದಿನಾಂಕ 09 ಅಕ್ಟೋಬರ್ 2024ರಂದು ಮೂಡಬಿದಿರೆಯ ಶ್ರೀ ಯಕ್ಷನಿಧಿ (ರಿ.) ಇವರಿಂದ ‘ಶ್ವೇತ ಕುಮಾರ ಚರಿತ್ರೆ’, ದಿನಾಂಕ 10 ಅಕ್ಟೋಬರ್ 2024ರಂದು ಬಂಟ್ವಾಳದ ಶ್ರೀ ಮಹಿಷ ಮರ್ದಿನಿ ಯಕ್ಷ ಮಿತ್ರರು ಇವರಿಂದ ‘ಶ್ರೀ ದೇವಿ ಮಹಿಷ ಮರ್ದಿನಿ’, ದಿನಾಂಕ 11 ಅಕ್ಟೋಬರ್ 2024ರಂದು ಸುರತ್ಕಲ್ ಕೃಷ್ಣಾಪುರದ ಶ್ರೀ ಸಿದ್ಧಿವಿನಾಯಕ ಯಕ್ಷ ನಾಟ್ಯ ಕಲಾ ಕೇಂದ್ರದವರಿಂದ ‘ಲೀಲಾ ಮಾನುಷ ವಿಗ್ರಹ’, ದಿನಾಂಕ 12 ಅಕ್ಟೋಬರ್ 2024ರಂದು ಉರ್ವದ ಶ್ರೀ ಮಾರಿಯಮ್ಮ ಯಕ್ಷಗಾನ ಬಾಲ ಸಂಸ್ಕಾರ ಕೇಂದ್ರದವರಿಂದ ‘ಏಕಾದಶೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಹಾಗೂ ಸಂಜೆ 6-00 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಸಾಧಕ ಸನ್ಮಾನ, ಸಮಾರೋಪ ಸಮಾರಂಭ ಹಾಗೂ ಕದಳಿ ಕಲಾ ಕೇಂದ್ರದ 12ನೇ ವಾರ್ಷಿಕೋತ್ಸವ ನಡೆಯಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಕದಳಿ ಕಲಾ ಕೇಂದ್ರದವರಿಂದ ‘ಶ್ರೀ ದೇವಿ ಕದಂಬ ಕೌಶಿಕೆ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.