ಮಂಗಳೂರು : ಕದ್ರಿ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ವಾರ್ಷಿಕ ನವರಾತ್ರಿ ಉತ್ಸವದ ಪ್ರಯುಕ್ತ ಕದ್ರಿ ಶ್ರೀ ಮಂಜುನಾಥ ದೇವಳದ ಸಹಯೋಗದೊಂದಿಗೆ ಕದಳಿ ಕಲಾ ಕೇಂದ್ರ ಸಂಯೋಜಿಸಿದ 12ನೇ ವರ್ಷದ ‘ಕದಳಿ ದಶಾಹ’ ಮಕ್ಕಳ ಹಾಗೂ ಯುವ ತಂಡಗಳಿಂದ ಯಕ್ಷಗಾನ ಕಾರ್ಯಕ್ರಮವು ದಿನಾಂಕ 12 ಅಕ್ಟೋಬರ್ 2024ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಸಂಪನ್ನಗೊಂಡಿತು.
ಶ್ರೀ ಪಂಚಾಕ್ಷರಿ ಮಕ್ಕಳ ಮೇಳ ಎಲ್ಲೂರು ಉಡುಪಿ, ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ಯಕ್ಷಗಾನ ಮಂಡಳಿ ಲಕ್ಷ್ಮೀಪುರ ಕರ್ಕಳ, ಶ್ರೀ ದೇವಿ ಮಹಿಳಾ ಯಕ್ಷ ತಂಡ ಬಾಲವನ ಪುತ್ತೂರು, ಯಕ್ಷಮಿತ್ರರು (ರಿ.) ಪೊರ್ಕೊಡಿ ಪೇಜಾವರ, ಯಕ್ಷರಾಧನಾ ಕಲಾಕೇಂದ್ರ (ರಿ) ಉರ್ವ ಮಂಗಳೂರು, ಶ್ರೀ ನಾಗಬ್ರಹ್ಮ ಯಕ್ಷ ಕಲಾ ಕೇಂದ್ರ ಕೋಡಿಕಲ್ ಮಂಗಳೂರು, ಶ್ರೀ ಯಕ್ಷನಿಧಿ (ರಿ) ಮೂಡಬಿದಿರೆ, ಶ್ರೀ ಮಹಿಷ ಮರ್ದಿನಿ ಯಕ್ಷ ಮಿತ್ರರು ಪೂಂಜ ಬಂಟ್ವಾಳ, ಶ್ರೀ ಸಿದ್ಧಿವಿನಾಯಕ ಯಕ್ಷ ನಾಟ್ಯ ಕಲಾ ಕೇಂದ್ರ ಕೃಷ್ಣಾಪುರ ಸುರತ್ಕಲ್, ಶ್ರೀ ಮಾರಿಯಮ್ಮ ಯಕ್ಷಗಾನ ಬಾಲ ಸಂಸ್ಕಾರ ಕೇಂದ್ರ ಉರ್ವ ಮಂಗಳೂರು, ಕದಳಿ ಕಲಾ ಕೇಂದ್ರ ಮಂಗಳೂರು, ಶ್ರೀ ದೇವಿ ಯಕ್ಷ ಬಳಗ ಬಾಲವನ ಪುತ್ತೂರು ಈ ತಂಡಗಳಿಂದ ಯಕ್ಷಗಾನ ಕಾರ್ಯಕ್ರಮವು ಜರಗಿತು.
ಇದೇ ಸಂದರ್ಭದಲ್ಲಿ ಕದ್ರಿಯ ಹವ್ಯಾಸಿ ಬಳಗದ ಸಂಚಾಲಕರಾದ ಶ್ರೀ ಶರತ್ ಕುಮಾರ್ ಕದ್ರಿ ಮತ್ತು ವೈಭವ ಕ್ರಿಯೇಟಿವ್ಸ್ ಇದರ ಮಾಲಕರಾದ ಶ್ರೀ ಬಾಲಕೃಷ್ಣ ಕದ್ರಿ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಧಾಕರ ರಾವ್ ಪೇಜಾವರ ಸ್ವಾಗತಿಸಿ, ಸಂಸ್ಥಾಪಕರಾದ ಶ್ರೀ ರಮೇಶ್ ಭಟ್ ಕೆ. ವಂದಿಸಿ ಹಾಗೂ ಶೋಭಾ ಪೇಜಾವರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಶ್ರೀ ವಾಸುದೇವ ಕಾಮತ್, ಶ್ರೀ ಗೋಕುಲದಾಸ ಕಾಮತ್, ಶ್ರೀ ರಘುರಾಮ್ ಕಾಮತ್, ಶ್ರೀ ಅಶೋಕ್ ಕಾಮತ್, ಶ್ರೀ ಡಾ. ಶುಭಾನಂದ ರಾವ್, ಶ್ರೀ ದಾಮೋದರ ರೈ, ಶ್ರೀ ಶ್ರೀನಾಥ್ ಕದ್ರಿ, ಶ್ರೀ ಶರತ್ ಕುಮಾರ್ ಕದ್ರಿ, ಶ್ರೀ ಬಾಲಕೃಷ್ಣ ಕದ್ರಿ, ಶ್ರೀ ಪ್ರದೀಪ ಕುಮಾರ ಕಲ್ಕೂರ, ಶ್ರೀ ಕೃಷ್ಣ ಅಡಿಗ ಕದ್ರಿ, ಶ್ರೀ ರಾಮ ಟ್ರಾನ್ಸ್ ಪೋರ್ಟ್ ಪೈನಾನ್ಸ್ ಲಿಮಿಟೆಡ್ ಮಂಗಳೂರು, ಶ್ರೀ ಸುಂದರ ಶೆಟ್ಟಿ ಬೆಟ್ಟಂಪಾಡಿ, ಶ್ರೀ ಜೆ.ವಿ. ಶೆಟ್ಟಿ, ಶ್ರೀ ಗೋಕುಲ ಕದ್ರಿ, ಶ್ರೀ ಅರುಣ್ ಕುಮಾರ ಗುರಿತೋಟ, ಶ್ರೀ ಸುಧೀರ್ ಕಾಮತ್, ಶ್ರೀಮತಿ ನಿವೇದಿತಾ ಶೆಟ್ಟಿ ಉಪಸ್ಥಿತರಿದ್ದರು. ಸುಮಾರು 13 ತಂಡಗಳಿಂದ 500 ಕಲಾವಿದರು ಭಾಗವಹಿಸಿದ್ದರು.