ಉಪ್ಪಿನಂಗಡಿ : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ,ಪುತ್ತೂರು. ಇವರ ವತಿಯಿಂದ ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಪರಿವಾರ ದೈವಗಳ ನಾಲ್ಕನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವದ ಅಂಗವಾಗಿ ‘ಕದಂಬ ಕೌಶಿಕೆ’ ಎಂಬ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 08/02/2023 ನೇ ಗುರುವಾರದಂದು ನಡೆಯಿತು.
ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವ ಶ್ರೀ ಪದ್ಮನಾಭ ಕುಲಾಲ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಕೌಶಿಕೆ), ಶ್ರೀಮತಿ ಶುಭಾ. ಜೆ. ಸಿ. ಅಡಿಗ(ರಕ್ತಬೀಜ), ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ(ಸುಗ್ರೀವ), ಶ್ರೀಮತಿ ಹರಿಣಾಕ್ಷಿ.ಜೆ.ಶೆಟ್ಟಿ(ಶುಂಭ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮಕ್ಕೆ ಶಿವರಾಮ ಗೌಡ, ಬೊಮ್ಮಣ್ಣ ಗೌಡ, ಮನೋಹರ ಶೆಟ್ಟಿ ಮತ್ತು ಪ್ರಶಾಂತ್ ಪೈ ಸಹಕಾರವಿತ್ತರು.

