ಬೆಂಗಳೂರು : ಬೆಂಗಳೂರಿನಲ್ಲಿ ನೆಲೆ ನಿಂತಿರುವ ಮಲೆನಾಡ ಬರಹಗಾರರ ಸೃಜನಾತ್ಮಕ ಅಭಿವ್ಯಕ್ತಿಯ ವೇದಿಕೆಯಾಗಿ ʼಮಲೆನಾಡ ಬರಹಗಾರರ ವೇದಿಕೆʼ ರೂಪುಗೊಂಡಿದೆ. ಪುಸ್ತಕ ಪ್ರಕಟಣೆ, ವಿಚಾರ ಸಂಕಿರಣ, ಚಿಂತನಾ ಕಮ್ಮಟಗಳು, ಸಮ್ಮೇಳನಗಳು ಹೀಗೆ ವಿಭಿನ್ನ ಯೋಜನೆಗಳನ್ನು ಹೊಂದಿರುವ ಈ ವೇದಿಕೆಯ ಮೊದಲ ಪುಸ್ತಕವಾಗಿ ‘ಕಾಡಸುರಗಿ’ ಎಂಬ ನಲವತ್ತು ಮಲೆನಾಡು ಸಾಧಕರ ಜೀವನ ಸಾಧನೆಯನ್ನು ಪರಿಚಯಿಸುವ ಕೃತಿಯು ದಿನಾಂಕ 15 ನವಂಬರ್ 2025ರ ಶನಿವಾರ ಸಂಜೆ ಗಂಟೆ 5-30ಕ್ಕೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರಾದ ಪದ್ಮಶ್ರೀ ಗಿರೀಶ್ ಕಾಸರವಳ್ಳಿಯವರು ಕೃತಿಯನ್ನು ಬಿಡುಗಡೆ ಮಾಡಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್, ಪ್ರಖ್ಯಾತ ಗಾಯಕಿ ನಾಡೋಜ ಡಾ. ಬಿ.ಕೆ. ಸುಮಿತ್ರ, ಜವಹರಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ. ಬಿ.ಆರ್. ಗುರುಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಲೆನಾಡು ಬರಹಗಾರರ ವೇದಿಕೆ ಅಧ್ಯಕ್ಷರಾದ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಒಟ್ಟು ಹದಿನೆಂಟು ಲೇಖಕರ ಲೇಖನಗಳ ಕೃತಿಯನ್ನು ಮಂಡಗದ್ದೆ ಶ್ರೀನಿವಾಸಯ್ಯ, ಎಚ್.ಸಿ. ಚಿದಾನಂದ ಹೆಗ್ಗಾರು, ಎಚ್.ಸಿ. ಜಯಪ್ರಕಾಶ್ ಮತ್ತು ಎನ್.ಎಸ್. ಶ್ರೀಧರ ಮೂರ್ತಿಯವರನ್ನುಳ್ಳ ಸಂಪಾದಕ ಮಂಡಳಿ ಸಂಪಾದಿಸಿದ್ದು, ಡಾ. ಬಿ.ಆರ್. ಗುರುಪ್ರಸಾದ್, ಡಾ. ಪ್ರಿಯಾಂಕ ಅರಮನೆ, ಡಾ. ಪ್ರಶಾಂತ ಶೀರೂರು, ಶುಭಶ್ರೀ ಭಟ್, ಡಾ. ಅರುಣಾ ಕೆ.ಆರ್., ಡಾ. ಅನಿತಾ ಹೆಗ್ಗೂಡು, ಕೆ.ಎಂ. ಜಯಕುಮಾರ್ ಕೆಸಗೋಡು, ರಮೇಶ್ ಬೇಗಾರ್, ಡಾ. ಶ್ರುತಿ ಎಸ್.ಡಿ., ಕಿಗ್ಗ ರಾಜಶೇಖರ ಎಸ್.ಜಿ., ಅಚ್ಚಿನಹಳ್ಳಿ ಸುಚೇತನ, ಡಾ. ಶ್ರುತಿ ತಲನೇರಿ, ಸವೀನ ಹಾರೋಗೊಳಿಗೆ, ಅಶ್ವಿತ್ ಪಡುವಳ್ಳಿ, ಪ್ರಣಿತ ತಿಮ್ಮಪ್ಪ ಗೌಡ ಇವರುಗಳು ಕೃತಿಯ ಲೇಖಕರಾಗಿರುತ್ತಾರೆ.


