ಮಂಗಳೂರು: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪ್ರಥಮ ಮಕ್ಕಳ ಮೇಳ ‘ಸರಯೂ ಬಾಲ ಯಕ್ಷ ವೃಂದ ಕೋಡಿಕಲ್’ ಇವರು ಕದ್ರಿ ದೇವಸ್ಥಾನ ಸಹಕಾರದೊಂದಿಗೆ ನಡೆಯುವ ‘ಸರಯೂ ಸಪ್ತಾಹ -2023’ ದಿನಾಂಕ 25-05-2023 ರಿಂದ 31-05-2023ರವರೆಗೆ ಪ್ರತಿ ದಿನ ಸಂಜೆ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ.
ಈ ಸಪ್ತಾಹ ಕಾರ್ಯಕ್ರಮದಲ್ಲಿ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳಮದ್ದಳೆಗಳು ನಡೆಯಲಿದ್ದು, ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀ ಕ್ಷೇತ್ರ ಕದ್ರಿಯ ವೇ.ಮೂ. ಶ್ರೀ ನರಸಿಂಹ ತಂತ್ರಿಗಳು ನೆರವೇರಿಸಲಿರುವರು.
ಯಕ್ಷಗಾನ ಬಯಲಾಟಗಳು ಪ್ರತೀದಿನ ಸಂಜೆ 5.30ರಿಂದ
25-05-2023 ಗುರುವಾರ : ವಿಜಯದ್ವಯ
26-05-2023 ಶುಕ್ರವಾರ : ಓಂ ನಮೋ ಭಗವತೇ ವಾಸುದೇವಾಯ, ಓಂ ನಮಃ ಶಿವಾಯ
27-05-2023 ಶನಿವಾರ : ದೇವಿ ಮಹಾತ್ಮೆ (ಅಪರಾಹ್ನ 2:30ರಿಂದ)
28-05-2023 ರವಿವಾರ : ವೀರ ವೀರೇಶ (ಕಥೆ : ಉದನೇಶ್ವರ ಪ್ರಸಾದ್ ಮೂಲಡ್ಕ ಪ್ರಸಂಗ ರಚನೆ : ರವಿ ಅಲೆವೂರಾಯ ವರ್ಕಾಡಿ)
29-05-2023 ಸೋಮವಾರ : ವೀರ ಅಭಿನಂದನಾಖ್ಯ
30-05-2023 ಮಂಗಳವಾರ : ಯಜ್ಞ ಸಂರಕ್ಷಣೆ – ನರಕಾಸುರ
31-05-2023 ಬುಧವಾರ : ಇಳಾರಜತ (ಪ್ರಸಂಗ ರಚನೆ : ರವಿ ಅಲೆವೂರಾಯ ವರ್ಕಾಡಿ)
ಮಹಿಳಾ ತಾಳಮದ್ದಳೆ ಸಂಭ್ರಮ
28-05-2023 ರವಿವಾರ
ಬೆಳಿಗ್ಗೆ 9-00ರಿಂದ 11-00 ದಾಶರಥಿ ದರ್ಶನ – ಸರಯೂ ಮಹಿಳಾ ವೃಂದ, ಕೋಡಿಕಲ್
ಮಧ್ಯಾಹ್ನ 11-00ರಿಂದ 1-00 ಶ್ರೀ ಮಾತೆ ಭದ್ರಕಾಳಿ – ಶ್ರೀ ರಾಮ ಕ್ಷತ್ರಿಯ ಮಹಿಳಾ ವೃಂದ, ಜೆಪ್ಪು
ಮಧ್ಯಾಹ್ನ 1:00ರಿಂದ 3-00 ವೀರಮಣಿ ಕಾಳಗ – ಧೀಶಕ್ತಿ ಯಕ್ಷ ಬಳಗ, ಪುತ್ತೂರು
ಸಂಜೆ 3.00ರಿಂದ 5.30 ಶ್ರೀ ಕೃಷ್ಣ ಕಾರುಣ್ಯ – ಯಕ್ಷ ಮಂಜುಳಾ ಕದ್ರಿ
ಈ ಸಪ್ತಾಹದ ಸಂದರ್ಭದಲ್ಲಿ ಶ್ರೀಯುತರುಗಳಾದ ಡಾ. ಪಿ. ವಾಮನ್ ಶೆಣೈ, ಶ್ರೀ ರಾಧಾಕೃಷ್ಣ ಹೊಳ್ಳ ಕೋಡಿ, ಶ್ರೀ ಬಾಲಕೃಷ್ಣ ಗೌಡ ಮಿಜಾರು, ಶ್ರೀ ರಾಘವೇಂದ್ರ ಹೆಚ್.ವಿ., ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಪುತ್ತೂರು ಶ್ರೀ ರಮೇಶ್ ಭಟ್, ಅಮ್ಮುಂಜೆ ಶ್ರೀ ಮೋಹನ್ ಕುಮಾರ್, ಶ್ರೀ ಸಂಜಯ ಕುಮಾರ್ ಫಲಿಮಾರ್ ಇವರುಗಳನ್ನು ಸನ್ಮಾನಿಸಲಾಗುವುದು.
ಈ ಸಪ್ತಾಹದ ನಿರೂಪಣೆಯನ್ನು ಶ್ರೀಗಳಾದ ಸುಧಾಕರ ರಾವ್ ಪೇಜಾವರ, ಜನಾರ್ಧನ ಅಮ್ಮುಂಜೆ, ವಿನಯಾನಂದ ಕಾನಡ್ಕ, ಲಕ್ಷ್ಮೀನಾರಾಯಣ ನಿಡ್ವಣ್ಣಾಯ, ವಾಸುದೇವ ರಾವ್ ಕುಡುಪು, ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಶ್ರೀಮತಿ ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ ನಡೆಸಿಕೊಡಲಿರುವರು.