ಮಂಗಳೂರು : ಶ್ರೀ ಕಟೀಲು ಮೇಳದಲ್ಲಿ 35 ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಬಣ್ಣದ ವೇಷಧಾರಿ ನಗ್ರಿ ಮಹಾಬಲ ರೈ ಇವರಿಗೆ ಕದ್ರಿ ಯಕ್ಷ ಬಳಗ ‘ಕದ್ರಿ ವಿಷ್ಣು ಪ್ರಶಸ್ತಿ – 2024’ ನೀಡಿ ಗೌರವಿಸಿತು.
ಕದ್ರಿ ಯಕ್ಷ ಬಳಗದ ವತಿಯಿಂದ ದಿನಾಂಕ 27 ನವೆಂಬರ್ 2024ರಂದು ಆಯೋಜಿಸಲಾದ ಕಟೀಲು ಮೇಳದ ಸೇವೆ ಆಟದ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಭಾಗಿತ್ವದಲ್ಲಿ ಸದಸ್ಯ ಮೋಹನ್ ಕೊಪ್ಪಳ ಕದ್ರಿ ಅವರ ಉಪಸ್ಥಿತಿಯಲ್ಲಿ ಸುಧಾಕರ ರಾವ್ ಪೇಜಾವರ ಅವರು ಕದ್ರಿ ವಿಷ್ಣು ಸಂಸ್ಮರಣೆ ಮಾಡಿದರು.
ಬಳಗದ ಅಧ್ಯಕ್ಷ ನವನೀತ ಶೆಟ್ಟಿ, ಭಾಸ್ಕರ ಶೆಟ್ಟಿ, ಗುರುದೇವ್ ಕಲ್ಯಾಣ್, ಸೀತಾರಾಮ್ ಅರೆಕೆರೆಬೈಲ್, ರವೀಂದ್ರನಾಥ ಶೆಟ್ಟಿ ಮುಂಡೂರು ದೊಡ್ಡಮನೆ, ಗೋಕುಲ್ ಕದ್ರಿ, ಬೆಟ್ಟಂಪಾಡಿ ಸುಂದರ ಶೆಟ್ಟಿ, ಜಯಶೀಲ ಅಡ್ಯಂತಾಯ, ತಾರಾನಾಥ್ ಶೆಟ್ಟಿ ಬೋಳಾರ, ರಾಮಚಂದ್ರ ಭಟ್ ಎಲ್ಲೂರು, ನಿವೇದಿತಾ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಹರೀಶ್ ಕುಮಾರ್ ಚಿತ್ರಾಪುರ, ಮೂಲ್ಕಿ ಕರುಣಾಕರ ಶೆಟ್ಟಿ, ಪಣಂಬೂರು ಶ್ರೀಧರ ಐತಾಳ, ಸುಧಾಕರ ಶೆಟ್ಟಿ ದೋಣಿಂಜೆ ಹಾಗೂ ನಾಗೇಶ್ ಭಂಡಾರಿ ಡೊಂಬಿವಿಲಿ ಉಪಸ್ಥಿತರಿದ್ದರು.
ಶಿವಪ್ರಸಾದ್ ಪ್ರಭು ಸ್ವಾಗತಿಸಿ, ಪ್ರದೀಪ್ ಆಳ್ವ ಕದ್ರಿ ಸಮ್ಮಾನ ಪತ್ರ ವಾಚಿಸಿ, ಪುರುಷೋತ್ತಮ ಭಂಡಾರಿ ಅಡ್ಯಾರ್ ಸಂಯೋಜಿಸಿದರು.
Subscribe to Updates
Get the latest creative news from FooBar about art, design and business.