ಮಂಗಳೂರು: ಶ್ರೀ ಕಟೀಲು ಮೇಳದಲ್ಲಿ 35 ವರ್ಷಗಳಿಂದ ಕಲಾ ಸೇವೆಗೈಯುತ್ತಿರುವ ಬಣ್ಣದ ವೇಷಧಾರಿ ನಗ್ರಿ ಮಹಾಬಲ ರೈ ಅವರಿಗೆ ಕದ್ರಿ ಯಕ್ಷ ಬಳಗವು ‘ಕದ್ರಿ ವಿಷ್ಣು ಪ್ರಶಸ್ತಿ -2024’ನೀಡಿ ಗೌರವಿಸಲಿದೆ. ದಿನಾಂಕ 26 ನವಂಬರ್ 2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿಯಲ್ಲಿ ಶ್ರೀ ಕಟೀಲು ಮೇಳದ ಸೇವೆ ಆಟದಂದು ‘ಕದ್ರಿ ವಿಷ್ಣು ಪ್ರಶಸ್ತಿ-2024’ ಪ್ರದಾನ ಸಮಾರಂಭ ನಡೆಯಲಿದೆ.
ಸುಬ್ರಹ್ಮಣ್ಯ, ಧರ್ಮಸ್ಥಳ ಹಾಗೂ ಕಟೀಲು ಮೇಳಗಳಲ್ಲಿ ಒಟ್ಟು ಐದೂವರೆ ದಶಕಗಳಿಂದ ತೆಂಕುತಿಟ್ಟಿನ ಪರಂಪರೆಯ ಬಣ್ಣದ ವೇಷಧಾರಿಯಾಗಿ ಯಕ್ಷಕಲಾ ಯಾನವನ್ನು ಮುನ್ನಡೆಸುತ್ತಿರುವ ನಗ್ರಿ ಮಹಾಬಲ ರೈ ಇವರು ಕಟೀಲು ಮೇಳದಲ್ಲಿ ನಿರಂತರ 34 ತಿರುಗಾಟವನ್ನು ಪೂರೈಸಿದ್ದಾರೆ. ಶ್ರೀದೇವಿ ಮಹಾತ್ಮೆಯ ಮಹಿಷಾಸುರ ಪಾತ್ರ ನಿರ್ವಹಣೆಯಲ್ಲಿ ಪ್ರಸಿದ್ದಿ ಪಡೆದಿದ್ದಾರೆ.
ಕದ್ರಿ ವಿಷ್ಣು ಇವರು ಇಚ್ಚಂಪಾಡಿ, ಕೂಡ್ಲು ಕೊರಕೋಡು, ಅಡೂರು, ಕುಂಡಾವು, ಕದ್ರಿ, ಧರ್ಮಸ್ಥಳ ಹಾಗೂ ಕಟೀಲು ಮೇಳಗಳಲ್ಲಿ ತೆಂಕುತಿಟ್ಟಿನ ರಾಜಕಿರೀಟ ವೇಷದಲ್ಲಿ ಅಪೂರ್ವ ಸಾಧನೆಗೈದಿದ್ದರು. ಅರ್ಜುನ, ಋತುಪರ್ಣ, ಇಂದ್ರಜಿತು, ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ಮೆರೆದಿದ್ದ ಈ ಮೇರು ಕಲಾವಿದನ ಸಂಸ್ಮರಣೆಯು ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆಯಲಿದೆ.
Subscribe to Updates
Get the latest creative news from FooBar about art, design and business.
ನಗ್ರಿ ಮಹಾಬಲ ರೈ ಅವರಿಗೆ ‘ಕದ್ರಿ ವಿಷ್ಣು ಪ್ರಶಸ್ತಿ -2024’ | ನವೆಂಬರ್ 26
Previous Articleಮಕ್ಕಳ ಕಲಾ ಲೋಕದ ‘ಸಾಹಿತ್ಯ ತಾರೆ ಪ್ರಶಸ್ತಿ’ ಘೋಷಣೆ
Next Article ಕಥಾಸಂಕಲನಕ್ಕೆ ಕಥೆಗಳ ಆಹ್ವಾನ | ಡಿಸೆಂಬರ್ 15