ಬೆಂಗಳೂರು : ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್, ಕಿರಂ ಪ್ರಕಾಶನ ಇವರ ವತಿಯಿಂದ ದಿನಾಂಕ 07 ಆಗಸ್ಟ್ 2025ರಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಕಿ.ರಂ. ನಾಗರಾಜ ಇವರ ನೆನಪಿನಲ್ಲಿ ‘ಕಾಡುವ ಕಿರಂ’ ಅಹೋರಾತ್ರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಇವರು ನೆರವೇರಿಸಲಿದ್ದಾರೆ. ‘ಕಿರಂ ಹೊಸ ಕವಿತೆ 2025’ ಕೃತಿಯನ್ನು ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಅಂತರರಾಷ್ಟ್ರೀಯ ಕಲಾವಿದರಾದ ಡಾ. ಎಂ.ಎಸ್. ಮೂರ್ತಿಯವರು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ಸಹನಾ ಕೆ.ಎನ್., ವಾರ್ತಾ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಕವನ ಕೆ.ಎನ್., ಉಪನ್ಯಾಸಕಿ ಚಂದನ ಕೆ.ಎನ್. ಭಾಗವಹಿಲಿದ್ದಾರೆ. ಕಾರ್ಯಕ್ರಮದ ಪ್ರಸ್ತಾವನೆಯನ್ನು ಸಂಶೋಧಕ ಮತ್ತು ಪತ್ರಕರ್ತ ಡಾ. ಪ್ರದೀಪ್ ಮಾಲ್ಗುಡಿ ಮಾಡಲಿದ್ದು, ‘ಕಿರಂ ಹೊಸ ಕವಿತೆ 2025’ ಕೃತಿಯ ಸಂಪಾದಕ ಎಸ್. ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಹಿರಿಯ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಇವರು ವಹಿಸಲಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ 2025ನೇ ಸಾಲಿನ ‘ಕಾಡುವ ಕಿರಂ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುತ್ತಿದೆ.
ಕಾಡುವ ಕಿರಂ 2024 ಪ್ರಶಸ್ತಿ ಪುರಸ್ಕೃತರು : ಎಂ.ಗೋಪಾಲ್ – ಜನಪರ ಹೋರಾಟ, ಡಾ. ಎಂ.ಉಷಾ – ಸ್ತ್ರೀವಾದ, ಸಾಹಿತ್ಯ ಮತ್ತು ಅನುವಾದ, ಪ್ರೊ. ಎಂ.ಜಿ. ಚಂದ್ರಶೇಖರಯ್ಯ – ಸಾಹಿತ್ಯ, ಶ್ರೀನಿವಾಸ ನಟೇಕರ್ ಎಸ್ – ವೈಚಾರಿಕತೆ ಮತ್ತು ರಂಗಭೂಮಿ, ಡಾ. ಕೂಡ್ಲೂರು ವೆಂಕಟಪ್ಪ – ಸಾಹಿತ್ಯ, ಸಂಶೋಧನೆ, ಟಿ. ನಾರಾಯಣ್ – ಚಿತ್ರಕಲೆ.
ರಾತ್ರಿ 8-00 ಗಂಟೆಗೆ ಬೆಂಗಳೂರು ಏಷ್ಯನ್ ಥಿಯೇಟರ್ ತಂಡದವರಿಂದ ಕಿ.ರಂ. ನಾಗರಾಜ ರಚನೆಯ ಸಿದ್ದರಾಮ್ ಕೊಪ್ಪರ್ ನಿರ್ದೇಶನದಲ್ಲಿ ‘ನೀಗಿಕೊಂಡ ಸಂಸ’ ನಾಟಕ ಪ್ರದರ್ಶನ ನಡೆಯಲಿದ್ದು, ಬೆಂಗಳೂರಿನ ಸಂಸ ಥಿಯೇಟರ್ ನಿರ್ವಹಣೆ ಮಾಡಲಿದ್ದಾರೆ. ರಾತ್ರಿ ಹತ್ತು ಗಂಟೆಯ ನಂತರ ಕಾವ್ಯನಮನ, ನುಡಿನಮನ, ರೇಖಾ ನಮನ, ಜನಪದ ನಮನ ಕಾರ್ಯಕ್ರಮಗಳು ನಡೆಯಲಿದ್ದು, ಮೊದಲನೆ ಗೋಷ್ಠಿಯಲ್ಲಿ ಡಾ. ಕೆ. ಷರೀಫ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಡಾ. ಕೆ.ವೈ. ನಾರಾಯಣಸ್ವಾಮಿ, ಡಾ. ಎಚ್. ಲಕ್ಷ್ಮೀನಾರಾಯಣಸ್ವಾಮಿ, ಡಾ. ಎಚ್.ಎಲ್. ಪುಷ್ಪ, ಡಾ. ರಾಮಲಿಂಗಪ್ಪ ಟಿ. ಬೇಗೂರು, ಡಾ. ಹುಲಿಕುಂಟೆ ಮೂರ್ತಿ, ರಂಗಸ್ವಾಮಿ ಸಿದ್ದಯ್ಯ, ಗಿರೀಶ್ ಹಂದಲಗೆರೆ, ದಿವ್ಯ ಆಂಜನಪ್ಪ, ಡಾ. ಪ್ರಕಾಶ್ ಮಂಟೇದ, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಡಾ. ರವಿಕುಮಾರ್ ನೀಹ, ಚಾಂದ್ ಕವಿಚಂದ್ರ, ಮೌನೇಶ್ ಎಲ್. ಬಡಿಗೇರ, ವಿಕಾಸ್ ಆರ್. ಮೌರ್ಯ, ಯಂಶ ಬೇಂಗಿಲ, ಡಾ. ಟಿ. ಲಕ್ಷ್ಮೀನಾರಾಯಣ, ಡಾ. ಸತ್ಯಮಂಗಲ ಮಹಾದೇವ, ಡಾ. ಟಿ. ಯಲ್ಲಪ್ಪ, ಎಲ್.ಎನ್. ಮುಕುಂದರಾಜ್, ಆರ್.ಜಿ. ಹಳ್ಳಿ ನಾಗರಾಜ್, ಎರಡನೇ ಗೋಷ್ಠಿಯಲ್ಲಿ ಕೃಷ್ಣ ರಾಯಚೂರು, ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ, ಡಾ. ಉಮಾಶಂಕರ್ ಎಚ್.ಡಿ., ಡಾ. ಕೆ. ಮುರಳಿ ಮೋಹನ್ ಕಾಟಿ, ಮಂಜುನಾರಾಯಣ್ ಕೆ.ಎಲ್., ಡಾ. ಡಿ.ಆರ್. ದೇವರಾಜ್, ಆಲೂರು ದೊಡ್ಡನಿಂಗಪ್ಪ, ಕುಮಾರ್ ಇಂದ್ರಬೆಟ್ಟ, ಫೀನಿಕ್ಸ್ ರವಿ, ಧರಣಿಕಾಂತ್ ಎಸ್., ಸಂಘಮಿತ್ರೆ ನಾಗರಘಟ್ಟ, ಶಾರದ ಎಸ್., ಎಸ್.ಪಿ. ಮಹದೇವ ಹೇರಂಬ, ಸಿದ್ದೇಶ್ ಸಿದ್ದನಮಠ, ಪ್ರವೀಣ ನಿಂಗಪ್ಪ ಕಿತ್ನೂರ, ಭಾವನ ಎಸ್., ಎ. ರಘುಪತಿ, ರುಕ್ಮಿಣಿ ಎಸ್. ನಾಯರ್, ಸಂತೋಷ್ ಟಿ., ದ್ವಾರನಕುಂಟೆ ಪಿ. ಚಿತ್ತಣ್ಣ, ಮೂರನೇ ಗೋಷ್ಠಿಯಲ್ಲಿ ಮೇದರದೊಡ್ಡಿ ಹನುಮಂತ, ಯಶಸ್ವಿನಿ ಶ್ರೀಧರಮೂರ್ತಿ, ಉಷಾ ಬೆಳ್ಳಟ್ಟಿ, ಶಿವರಾಜ ಸ. ಅರಳಿ, ಶೇಖರಯ್ಯ ಟಿ.ಎಚ್.ಎಂ. ಗೆದ್ದಲಗಟ್ಟೆ, ನಾಗೇಂದ್ರ ಹೆಬ್ಬಾರ್, ಲವಿನ್ ಲೋಪೆಜ್, ಗಂಗಸ್ವಾಮಿ, ಕೃಪಾ ದೇವರಾಜ್, ಬಿ. ರವಿಕುಮಾರ್ ಚಿತ್ರದುರ್ಗ, ಪ್ರಗತಿ ಕೆ., ಡಾ. ಮೈತ್ರಿ ಭಟ್, ವಿದ್ಯಾ ಅರಮನೆ, ವಿನೋದ್ ಕೆ.ಎಲ್., ಮೈಬೂಬ ಸಾಹೇಬ ವೈ.ಜೆ., ನಿರ್ಮಲಕುಮಾರಿ ಎಸ್., ಹರೀಶ್ ಕೋಳಗುಂದ, ದೊ.ಚಿ. ಗೌಡ (ರೈತಕವಿ), ನಾರಾಯಣಸ್ವಾಮಿ (ನಾನಿ), ಮೊಹಮ್ಮದ್ ರಫೀಕ್ ಕೊಟ್ಟೂರು, ಡಾ. ಸಂಧ್ಯಾ ಎಚ್.ಎಸ್., ತರುಣ್ ಎಂ ಆಂತರ್ಯ, ನಾಲ್ಕನೇ ಗೋಷ್ಠಿಯಲ್ಲಿ ಸತೀಶ್ ಗರಣಿ, ನಾಗೊಂಡಹಳ್ಳಿ ಸುನೀಲ್, ದೀಪಿಕಾ ಬಾಬು, ಗುರುಗೌತಮ್ ಹಳೇಪುರ, ಮೀರಾ ನಾಡಿಗ್, ಉಪೇಂದ್ರಕುಮಾರ್ ಎಂ.ಆರ್., ಎನ್. ರವಿಶಂಕರ್, ಜಬೀವುಲ್ಲಾ ಎಂ. ಅಸದ್, ಎಸ್.ಕೆ. ಸುರೇಶ್ ತೌಡೂರು, ಶರಣ ಬಸವ, ಎಂ.ಎ. ಗುಡದನಾಳ, ನವೀನ್ ಕುಮಾರ್ ಜಿ. ಬೇವಿನಾಳ್, ಡಾ. ಪ್ರಸನ್ನ ನಂಜಾಪುರ, ರವಿಕುಮಾರ ಜಾಧವ, ಡಾ. ಕೂಡ್ಲೂರು ವೆಂಕಟಪ್ಪ, ನಾವೆಂಕಿ, ಸೌಮ್ಯ ಎಂ ಎಸ್., ರಾಧಾ ಬಿ ಕೆ., ಬಳೇಪೇಟೆ ಪ್ರಕಾಶ್, ಕುಸುಮಾಕರ ಅಂಬೆಕಲ್ಲು, ಮಧು ಬಿರಾದಾರ, ಡಿ.ಶಬ್ರಿನಾ ಮಹಮದ್ ಅಲಿ ಚಳ್ಳಕೆರೆ ಸೇರಿದಂತೆ ಹಿರಿಯ ಮತ್ತು ಕಿರಿಯ ಕವಿಗಳು ಕವಿತೆಗಳನ್ನು ವಾಚಿಸಲಿದ್ದಾರೆ.
ಪ್ರತಿ ಗೋಷ್ಠಿಯ ನಡುವೆ ಜನಪದ ಗೀತೆಗಳು, ರಂಗಗೀತೆ, ಜನಪದ ಮಹಾಕಾವ್ಯಗಳ ಗಾಯನ ಇರಲಿದ್ದು, ಇದರೊಂದಿಗೆ ವಿಶೇಷ ಉಪನ್ಯಾಸಗಳನ್ನು ಕೂಡ ಆಯೋಜಿಸಲಾಗಿದೆ. ಸಿ.ಎಂ. ನರಸಿಂಹಮೂರ್ತಿ, ಕೆ.ಎಸ್. ಮಂಜುನಾಥ್, ಶಂಕರ್ ಭಾರತೀಪುರ, ಆನೇಕಲ್ ರಾಜೇಶ್, ಅರುಣ್ ಕುಮಾರ್ ಮಾಂಬಳ್ಳಿ, ಉಮ್ಮತ್ತೂರು ಬಸವರಾಜ್ ಮೊದಲಾದವರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ವೆಂಕಟೇಶ್ ಜೋಷಿ ತಬಲಾ ಸಾಥ್ ಮತ್ತು ಚಿದಾನಂದ ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಬೆಳಿಗ್ಗೆ ಗಂಟೆ 5-30ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ಭಾಷಣವನ್ನು ಕನ್ನಡ ಅಧ್ಯಾಪಕರಾದ ಡಾ. ಸುಭಾಷ್ ರಾಜಮಾನೆ ಮಾಡಲಿದ್ದು, ಅತಿಥಿಯಾಗಿ ತಮಿಳುನಾಡಿನ ಸಾಂಸ್ಕೃತಿಕ ಸಂಘಟಕ ಶ್ರೀನಿವಾಸನ್ ಭಾಗವಹಿಸುತ್ತಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಂಗವಿಮರ್ಶಕ ಡಾ. ರುದ್ರೇಶ್ ಅದರಂಗಿ ವಹಿಸಲಿದ್ದಾರೆ.
ಸಂಜೆ 6-00 ಗಂಟೆಗೆ ಜನಪದ ಮಹಾಕಾವ್ಯಗಳ ಗಾಯನ: ಆಲ್ಕೆರೆ ಶಿವಕುಮಾರ್ ಮತ್ತು ಸಂಗಡಿಗರು, ಚಾಮರಾಜನಗರ
ರಾತ್ರಿ 10-00 ಗಂಟೆಗೆ ಕಿ.ರಂ. ನುಡಿನಮನ: ದಾಸನೂರು ಕೂಸಣ್ಣ, ಸಮುದಾಯ ಚಿಂತಕರು
ವಿಷಯ: ಮೀಸಲಾತಿ ಮತ್ತು ಒಳ ಮೀಸಲಾತಿ: ಸಾಂವಿಧಾನಿಕ ಆಶಯಗಳು
ರಾತ್ರಿ 12-00 ಗಂಟೆಗೆ ಕಿ.ರಂ. ನುಡಿನಮನ: ಡಾ. ರಾಜಪ್ಪ ದಳವಾಯಿ, ನಾಟಕಕಾರರು
ವಿಷಯ: ಅಪಾಯಕಾರಿ ಪದಗಳು: ಸಂಸ್ಕೃತಿ, ಸಂಸ್ಕೃತಿ ಚಿಂತಕ
ರಾತ್ರಿ 02-00 ಗಂಟೆಗೆ ಕಿ.ರಂ. ನುಡಿನಮನ: ಹರ್ಷ ಕುಮಾರ್ ಕುಗ್ವೆ ಪತ್ರಕರ್ತರು
ವಿಷಯ: ವೈಜ್ಞಾನಿಕ ಮನೋಭಾವ ಮತ್ತು ವರ್ತಮಾನ ಭಾರತ
ಜನಪದ ನಮನ: ಅಪ್ಪೆಗೆರೆ ತಿಮ್ಮರಾಜು ಹಿರಿಯ ಜನಪದ ಗಾಯಕರು
ಸಿ.ಎಂ. ನರಸಿಂಹಮೂರ್ತಿ, ಚಾಮರಾಜನಗರ, ಖ್ಯಾತ ಜನಪದ ಗಾಯಕರು
ಕೆ.ಎಸ್. ಮಂಜುನಾಥ್, ಖ್ಯಾತ ಜನಪದ ಗಾಯಕರು
ಶಂಕರ್ ಭಾರತೀಪುರ, ಖ್ಯಾತ ಜನಪದ ಗಾಯಕರು
ಆನೇಕಲ್ ರಾಜೇಶ್, ಖ್ಯಾತ ಜನಪದ ಗಾಯಕರು
ಅರುಣ್ ಕುಮಾರ್ ಮಾಂಬಳ್ಳಿ, ಖ್ಯಾತ ಜನಪದ ಗಾಯಕರು
ರಂಗಗೀತೆ: ಉಮ್ಮತ್ತೂರು ಬಸವರಾಜು, ಖ್ಯಾತ ಗಾಯಕರು
ತಬಲಾ ಸಾಥ್: ವೆಂಕಟೇಶ್ ಜೋಷಿ ಮತ್ತು ಹಾರ್ಮೋನಿಯಂ: ಚಿದಾನಂದ ಕುಲಕರ್ಣಿ
ಮುಂಜಾನೆ 4-00 ಗಂಟೆಗೆ ಕಿ.ರಂ. ನುಡಿನಮನ: ಶಾಂತರಾಜ್, ಉಪಪ್ರಾಂಶುಪಾಲರು ವಿಜಯ ಸಂಜೆ ಕಾಲೇಜು
ವಿಷಯ: ಕವಿತೆಗಳ ಅನುಸಂಧಾನ