ಮೈಸೂರು : ಸುವ್ವಿ ಅರ್ಪಿಸುವ ಕೈಲಾಸಂ ಬದುಕು ಬರಹಗಳ ಸಮೀಕ್ಷೆಯ ‘ಕೈಲಾ ಸಂಸಾರ’ ಹಾಸ್ಯ ನಾಟಕವು ದಿನಾಂಕ 29 ಡಿಸೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ನಟನ ರಂಗ ಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ.
ಆಧುನಿಕ ಕನ್ನಡ ರಂಗಭೂಮಿಯ ಆಧ್ಯರಲ್ಲಿ ಕೈಲಾಸಂ ಹೆಸರು ಚಿರಸ್ಥಾಯಿ. ಅವರ ಬದುಕು ಬರಹಗಳ ಸಾರವನ್ನು ನಗುತ್ತಲೇ ಗ್ರಹಿಸುವ ಒಂದು ವಿಶಿಷ್ಟ ಪ್ರಯತ್ನ ಈ ನವೀನ ಪ್ರಯೋಗ. ರಂಗಭೂಮಿ ಕಿರುತೆರೆ ಹಿರಿತೆರೆಗಳ ಸುಂದರ್ ವೀಣಾ – ವೀಣಾ ಸುಂದರ್ ಜೊತೆಯಾಗಿ ನಿಮ್ಮನ್ನು ರಂಜಿಸಲಿದ್ದಾರೆ. ನಿರ್ಮಾಪಕಿ, ನಟಿ, ನಿರ್ದೇಶಕಿ ಶ್ರುತಿ ನಾಯ್ಡು ಈ ಪ್ರಯೋಗ ಆಯೋಜಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ – 9845223834, 7259537777 ಮತ್ತು 9480468327.