ಬೆಂಗಳೂರು : ಕಲಾ ಗಂಗೋತ್ರಿ ಇವರ ವತಿಯಿಂದ ‘ರಂಗಹಬ್ಬ’ ದೀಪಾವಳಿ ಧಮಾಕ ಮೂರು ನಾಟಕಗಳ ಪ್ರದರ್ಶನವನ್ನು ದಿನಾಂಕ 17, 18 ಮತ್ತು 19 ಅಕ್ಟೋಬರ್ 2025ರಂದು ಬೆಂಗಳೂರಿನ ಎನ್. ಆರ್. ಕಾಲೋನಿಯ ಸಿ. ಅಶ್ವಥ್ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 17 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ಸಿದ್ಧಾರ್ಥ್ ಭಟ್ ಇವರ ನಿರ್ದೇಶನದಲ್ಲಿ ‘ಸೂಜಿ ಮಲ್ಲಿಗೆ’, ದಿನಾಂಕ 18 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ಡಾ. ಬಿ.ವಿ. ರಾಜಾರಾಂ ಇವರ ನಿರ್ದೇಶನದಲ್ಲಿ ‘ಮನೆ ಮನೆ ಕಥೆ’, ದಿನಾಂಕ 19 ಅಕ್ಟೋಬರ್ 2025ರಂದು ಸಂಜೆ 6-30 ಗಂಟೆಗೆ ಡಾ. ಎಸ್.ಎಲ್. ಭೈರಪ್ಪ ಸ್ಮರಣೆಯಲ್ಲಿ ಡಾ. ಬಿ.ವಿ. ರಾಜಾರಾಂ ಇವರ ನಿರ್ದೇಶನದಲ್ಲಿ ‘ಮಂದ್ರ’ ನಾಟಕ ಪ್ರದರ್ಶನಗೊಳ್ಳಲಿದೆ.