ಮಂಗಳೂರು : ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ರೋಟರ‍್ಯಾಕ್ಟ್ ಕ್ಲಬ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆ (ಫಿಶರೀಸ್) ಚಿತ್ರಾಪುರ, ಕುಳಾಯಿ ಇವುಗಳ ಜಂಟಿ ಆಶ್ರಯದಲ್ಲಿ ಗಾಂಧೀಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಜನ್ಮ ದಿನಾಚರಣೆಯ ಪ್ರಯುಕ್ತ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ಕಲಾಚಿಗುರು ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಾಗಾರ’ ದಿನಾಂಕ 02 ಅಕ್ಟೋಬರ್ 2024ರಂದು ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಾಧವ ಸುವರ್ಣ ಮಾತನಾಡಿ “ಕಾಲೇಜು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಕಿರಿಯ ವಿದ್ಯಾರ್ಥಿಗಳಿಗೆ ಪರಿಚಯಿಸುವುದರಿಂದ ಕಿರಿಯರು ಪ್ರಭಾವಿತರಾಗಲು ಸಾಧ್ಯವಿದೆ.” ಎಂದರು. ನಿವೃತ್ತ ಶಿಕ್ಷಕಿ ಪುಷ್ಪಾವತಿ ಶ್ರೀನಿವಾಸ ರಾವ್ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ಸರಕಾರಿ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ.” ಎಂದರು.
ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಭರತ್ ಕುಮಾರ್, ಜೊತೆ ಕಾರ್ಯದರ್ಶಿ ಕುಮಾರ್ ಬಂಗೇರ, ಸದಸ್ಯ ತೇಜಪಾಲ್, ರೋಟರ‍್ಯಾಕ್ ಕ್ಲಬ್ ಇದರ ಶಿಕ್ಷಕ ಸಲಹೆಗಾರರಾದ ಡಾ. ಶಿಲ್ಪಾರಾಣಿ ಹಾಗೂ ರಮಿತಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಂಜುಳಾ, ಮಾಜಿ ಅಧ್ಯಕ್ಷರಾದ ಸಚಿನ್, ನವಮಂಗಳೂರು ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ಮುರಳೀಧರ್, ಜಿಲ್ಲಾ ಪದಾಧಿಕಾರಿಗಳಾದ ಮನೋಜ್ ಕುಮಾರ್, ಉಷಾ ಮನೋಜ್, ಶಿಕ್ಷಣ ಪ್ರೇಮಿ ಶ್ರೀನಿವಾಸ್ ರಾವ್, ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷೆಯಾದ ಶ್ರೀಮತಿ ಹಿತಾ ಉಮೇಶ್, ಸಾಂಸ್ಕೃತಿಕ ತರಬೇತುದಾರ ವಿನೋದ್ ಶೆಟ್ಟಿ, ಶಾಲಾ ಶಿಕ್ಷಕಿ ಜೆಸಿಂತಾ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿ, ನೀತಾ ತಂತ್ರಿ ಕಾರ್ಯಕ್ರಮ ನಿರೂಪಿಸಿ, ಸುಕೇಶಿನಿ ವಂದಿಸಿದರು. ರೋಟರ‍್ಯಾಕ್ಟ್ ಕ್ಲಬ್ ಇದರ ಸದಸ್ಯರಾದ ಭರತ್, ಮಾನಸ, ಪ್ರೀತಿ, ಪ್ರಾಂಜಲಿ, ಭೂಷಣ್, ಸ್ಮಿತ, ವಿಶಿಕಾ ಕೋಟ್ಯಾನ್, ಅಜಿತ್, ಗಗನ್, ಸ್ವಸ್ತಿಕ್, ತುಷಾರ್, ಜಿತಿನ್ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.