ಕೋಟ : ಕೋಟದ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ಮತ್ತು ಮಂಗಳೂರಿನ ಕರ್ಣಾಟಕ ಯಕ್ಷಧಾಮ ಜಂಟಿಯಾಗಿ ಆಯೋಜಿಸಿದ ‘ಕಲೋತ್ಸವ – 2024’ರ ಎರಡನೇ ದಿನ ಕಲಾವಿದಾಭಿನಂದನ ಹಾಗೂ ಬಯಲಾಟ ಕಾರ್ಯಕ್ರಮ ದಿನಾಂಕ 12-02-2024ರ ಸೋಮವಾರ ಸಂಜೆ ಕೋಟದ ಪಟೇಲರ ಮನೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ “ಜಾತಿ ಮತ ಕುಲ ಧರ್ಮಗಳ ಭೇದವಿಲ್ಲದೆ ಜನಸಾಮಾನ್ಯರನ್ನು ಆಕರ್ಷಿಸಿದ ಕಲೆ ಯಕ್ಷಗಾನ. ಚೌಕಿಯ ಪೂಜೆಯ ಮೊದಲ ಪ್ರಸಾದ ದಕ್ಕುವುದು ಭಾಗವತನಿಗೆ. ಭಾಗವತನ ಸ್ಥಾನಕ್ಕೆ ಬೆಲೆ ಹೊರತು ಅವನ ಜಾತಿಗಲ್ಲ. ರಂಜನೆಯೊಂದಿಗೆ ಮೌಲ್ಯ ಶಿಕ್ಷಣವನ್ನು ನೀಡಿದ ಶ್ರೀಮಂತ ಕಲೆ ಯಕ್ಷಗಾನ. ಈ ಕಲೆಯ ಮೂಲಕ ಸಂಸ್ಕೃತಿಯ ಉಳಿವು ಸಾಧ್ಯವಾಗಿದೆ.” ಎಂದು ಹೇಳಿದರು.
ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಮಹಾ ಪ್ರಬಂಧಕರಾದ ಮಹೇಶ್ ಜೆ., ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ, ಗೆಳೆಯರ ಬಳಗ ಸಾಲಿಗ್ರಾಮದ ತಾರಾನಾಥ ಹೊಳ್ಳ, ಕಲಾ ಸಾಹಿತಿ ಜನಾರ್ದನ ಹಂದೆ, ನಿವೃತ್ತ ಅಧ್ಯಾಪಕ ಹರಿಕೃಷ್ಣ ಹೊಳ್ಳ, ಯಕ್ಷದೇಗುಲದ ಸುದರ್ಶನ ಉರಾಳ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಣ್ಯರ ಸಮಕ್ಷಮದಲ್ಲಿ ಪೆರ್ಡೂರು ಮೇಳದ ಎಲ್ಲಾ ಹಿಮ್ಮೇಳ, ಮುಮ್ಮೇಳ ಮತ್ತು ನೇಪಥ್ಯ ಕಲಾವಿದರನ್ನು ಗೌರವಿಸಲಾಯಿತು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಸ್ವಾಗತಿಸಿ, ಹಾರ್ಯಾಡಿ ರಘುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿ, ಶ್ರೀರಾಮ್ ಮಧ್ಯಸ್ಥ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪೆರ್ಡೂರು ಮೇಳದ ಕಲಾವಿದರಿಂದ ‘ಬ್ರಹ್ಮಕಪಾಲ’ ಮತ್ತು ‘ಸುಭದ್ರಾ ಕಲ್ಯಾಣ’ ಎಂಬ ಯಕ್ಷಗಾನ ಬಯಲಾಟ ಸಂಪನ್ನಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ