ಬೆಂಗಳೂರು : ಪ್ರಯೋಗರಂಗ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನವನ್ನು ದಿನಾಂಕ 16 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ನಾಟಕದ ರಚನೆ ಕಿ.ರಂ. ನಾಗರಾಜ ಇವರು ಮಾಡಿದ್ದು, ಸಂಗೀತ ಹೆಚ್.ಕೆ. ಯೋಗಾನಂದ ಇವರು ನೀಡಿದ್ದು, ಸಿಜಿಕೆ ನಿರ್ದೇಶನ ಮಾಡಿರುತ್ತಾರೆ. ಪ್ರಸ್ತುತ ಟಿ. ರಘು ಇವರು ಮರು ನಿರ್ದೇಶನ ಮಾಡಿದ್ದು, ಡಾ. ಕೆ.ವಿ. ನಾಗರಾಜ ಮೂರ್ತಿ ಇವರು ನಿರ್ಮಾಣ ಮತ್ತು ನಿರ್ವಹಣೆ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 98451 72822 ಸಂಖ್ಯೆಯನ್ನು ಸಂಪರ್ಕಿಸಿರಿ.
ಪ್ರಯೋಗರಂಗದ ಬಗ್ಗೆ :
ಪ್ರಯೋಗರಂಗ ನಾಟಕ ತಂಡ ಕಳೆದ 25 ವರ್ಷಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ನಾಟಕ ಪ್ರರ್ದಶಿಸುತ್ತಾ ಬಂದಿದೆ. ‘ಮಂಟೆಸ್ವಾಮಿ ಕಥಾಪ್ರಸಂಗ’, ‘ಮೌನಿ’, ‘ಪ್ರೇತದ್ವೀಪ’, ‘ಮಲ್ಲಮ್ಮನ ಮನೆ ಹೋಟು’, ‘ಬ್ರಹ್ಮಚಾರಿ ಶರಣಾದ’, ‘ಮಹಿಪತ ಕ್ವಾಣನ ತಂಬಿಗಿ ಎಂ.ಎ’, ‘ಜುಮ್ನಾಳ ದೂಳ್ಯನ ಪ್ರಸಂಗ’, ‘ರಾಜಬೇಟೆ’, ‘ಸಂತೆಯಲ್ಲಿ ನಿಂತ ಕಬೀರ’, ‘ಪರಿಹಾರ’, ‘ಜುಗಾರಿ ಕೂಟ’, ‘ಸಿರಿ ಪುರಂದರ’, ‘ನಮ್ಮ ನಿಮ್ಮಳಗೊಬ್ಬ’, ‘ಹಳ್ಳಿಪ್ರೀತಿ’, ‘ಮತ್ತದೆ ಸಂಜೆ’, ‘ಸ್ಮಶಾನ ಕುರುಕ್ಷೇತ್ರ’, ‘ಯಮಳ ಪ್ರಶ್ನೆ’, ‘ಟಿ. ಪ್ರಸನ್ನನ ಗೃಹಸ್ತಾಶ್ರಮ’, ‘ಸಿಂಗಿರಾಜ’, ‘ನಾ ನೀನಾದರೆ ನೀ ನಾನೇನ’, ‘ಕರ್ಣಭಾರ’, ‘ನಿನ್ನೊಳು ನಾ ನನ್ನೊಳು ನೀ’, ‘ವಧೂಟಿ’, ‘ಮಕರ ಚಂದ್ರ’, ‘ಹುಚ್ಚೇರಿ ಎಸರಿನ ಪ್ರಸಂಗ’, ‘ಜಂಗಮದ ಬದುಕು’, ‘ಕೊಂದವರಾರು’, ‘ಸೀನಿಯರ್ ಸಿಟಿಜನ್’, ‘ಶಿವರಾತಿ’ ಹೀಗೆ ಹಲವಾರು ನಾಟಕಗಳನ್ನು ಪ್ರಯೋಗಿಸುತ್ತ ಬಂದಿದೆ. ಪ್ರಸ್ತುತ ‘ಕಾಲಜ್ಞಾನಿ ಕನಕ’ ನಾಟಕವನ್ನು ಪ್ರಯೋಗಿಸುತ್ತಿದೆ. ಯುವ ರಂಗಾಸಕ್ತರನ್ನು ರಂಗಭೂಮಿಗೆ ತರುವಲ್ಲಿ ರಂಗ ತರಬೇತಿ ಶಿಬಿರ ಹಮ್ಮಿಕೊಂಡಿದೆ ಹಾಗೂ ಸಾಮಾನ್ಯ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲು ನಾಟಕ ಹಾಗೂ ಬೀದಿ ನಾಟಕಗಳನ್ನು ಪ್ರರ್ದಶಿಸುತಿದೆ. ತಂಡವು ಅಮೇರಿಕದ ‘ನಾ.ವಿ.ಕ.’ ಹಾಗೂ ಸಿಂಗಾಪುರದಲ್ಲಿ ನಡೆದ ‘ವಿಶ್ವ ಸಾಂಸ್ಕೃತಿಕ ಉತ್ಸವ’ದಲ್ಲಿ ನಾಟಕಗಳನ್ನು ಪ್ರರ್ದಶಿಸಿದೆ.

									 
					