15 ಏಪ್ರಿಲ್ 2023, ಮಂಗಳೂರು: “ಕಲಾಕುಂಚ” (ರಿ) ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ- ಇದರ ಕೇರಳ, ಗಡಿನಾಡ ಘಟಕದಿಂದ ಸೌರಮಾನ ಯುಗಾದಿ (ವಿಷು) ಪ್ರಯುಕ್ತ ಸಾಹಿತ್ಯಕ್ಕೆ ಸಂಬಂಧ ಪಟ್ಟ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದೆ.
ಸಾಹಿತ್ಯದ ಹಲವು ಪ್ರಕಾರಗಳಲ್ಲಿ “ಜೋಗುಳ” ಹಾಡೂ ಪ್ರಧಾನವಾಗಿದೆ. ತೊಟ್ಟಿಲಲ್ಲಿ ಮಲಗಿದ ಪುಟ್ಟ ಮಗುವನ್ನು ತಾಯಿಯು ಜೋಗುಳ ಹಾಡಿ ತೂಗುತ್ತಿರುವ ದೃಶ್ಯ ಸುಮನೋಹರವಾದುದು. ಎಳೆಯ ಕಂದನನ್ನು ಶ್ರೀಕೃಷ್ಣ ಪರಮಾತ್ಮನಿಗೆ ಹೋಲಿಸಿ ರಾಗವಾಗಿ ಹಾಡುವಾಗ ತೊಟ್ಟಿಲ ಕಂದ ಹಾಡಿನ ಲಯ, ಇಂಪನ್ನು ಆಸ್ವಾದಿಸುತ್ತಾ ನಿದ್ರಾಲೋಕಕ್ಕೆ ಜಾರುತ್ತದೆ.
ಜೋಗುಳವನ್ನಾಲಿಸಿದ ಪುಟ್ಟ ಮಗುವಿನ ಏಕಾಗ್ರತಾ ಶಕ್ತಿಹೆಚ್ಚಾಗುತ್ತದೆ. ಚೆನ್ನಾಗಿ ನಿದ್ರೆ ಮಾಡುತ್ತದೆ.ಇತ್ತೀಚೆಗೆ ಈ ಪದ್ಧತಿ ನಶಿಸಿ ಹೋಗುತ್ತಿದೆ. ಈ ಪದ್ದತಿ ಪುನರಾವರ್ತನೆ ಆಗಬೇಕು. ಇಂದಿನ ಯಾಂತ್ರಿಕ ಬದುಕಿನ ಜಂಜಾಟದಿಂದ ಜನ ಹೊರಗೆ ಬರಬೇಕು. ಅದಕ್ಕಾಗಿ ಇದೊಂದು ವೇದಿಕೆ ತಯಾರಾಗಿದೆ.
ಜೋಗುಳ ಹಾಡು ರಚನಾ ಸ್ಪರ್ಧೆಯ ನಿಯಮಗಳು :
- ಒಬ್ಬರು ಒಂದೇ ಹಾಡನ್ನು ಕಳಿಸಬೇಕು.
- ಮೊಬೈಲಿನಲ್ಲಿ ಟೈಪಿಸಿದ ಹಾಡುಗಳನ್ನೇ ಕಳಿಸಿರಿ.
- ಅಕ್ಷರ ತಪ್ಪುಗಳಿಲ್ಲದ ಸುಂದರ ರಚನೆಯಾಗಿರಲಿ
- ಹನ್ನೆರಡರಿಂದ ಹದಿನಾರು ಸಾಲುಗಳ ಮಿತಿಯಲಿರಲಿ
- ಸುಶ್ರಾವ್ಯವಾಗಿ ಹಾಡಲು ಅನುಕೂಲವಾಗುವಂತೆ ಪದಗಳ ಜೋಡಣೆ, ಗೇಯತೆ ಇರಲಿ
- ನಿಮ್ಮ ಸುಂದರ ರಚನೆಗಳನ್ನು ಇದೇ ತಿಂಗಳ ಇಪ್ಪತ್ತನೇ (20/04/2023) ತಾರೀಕಿನ ಒಳಗೆ ಕೆಳಗೆ ನಮೂದಿಸಿದ ವಾಟ್ಸ್ ಆಪ್ ನಂಬರಿಗೆ ಕಳುಹಿಸಿರಿ..+91 8289800677.
- ಜೊತೆಗೇ ನಿಮ್ಮ ಮೊಬೈಲ್ ಸಂಖ್ಯೆ, ಹೆಸರು ವಿಳಾಸ ಸ್ಪಷ್ಟವಾಗಿ ನಮೂದಿಸಿರಬೇಕು.
ಅತ್ತುತ್ತಮವಾದ ಮೂರು ಹಾಡುಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. (ಪ್ರಶಸ್ತಿ ಪತ್ರ) ಕೃತಿ ಚೌರ್ಯಗಳಿಗೆ ಅವಕಾಶವಿಲ್ಲ. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿದೆ.