ಮಂಗಳೂರು : ಶರಧಿ ಪ್ರತಿಷ್ಠಾನ (ರಿ.) ಮಂಗಳೂರು ಆಯೋಜಿಸುವ ‘ಕಲಾಪರ್ಬ’ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳವನ್ನು ದಿನಾಂಕ 09ರಿಂದ 11 ಜನವರಿ 2026ರವರೆಗೆ ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ, ರಾಷ್ಟ್ರಮಟ್ಟದ ಛಾಯಚಿತ್ರ ಪ್ರದರ್ಶನ, ಶಿಲ್ಪಕಲಾ ಪ್ರದರ್ಶನ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಕಲಾ ವಿಚಾರಗೋಷ್ಠಿ, ಸಂಗೀತ, ಭಾವಚಿತ್ರ ಮತ್ತು ವ್ಯಂಗ್ಯ ಚಿತ್ರ ರಚನೆ ಪ್ರದರ್ಶನ ನಡೆಯಲಿದೆ.

