ಮಂಗಳೂರು : ಮಂಗಳೂರಿನ ಕಲಾಸೂರ್ಯ ನೃತ್ಯಾಲಯ ಇದರ ಎರಡನೇ ವರ್ಷದ ವಾರ್ಷಿಕ ಸಂಭ್ರಮದ ಪ್ರಯುಕ್ತ ಪ್ರಸ್ತುತ ಪಡಿಸುವ ‘ಪರಿಭ್ರಮಣ 2025’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಜೈಲ್ ರೋಡಿನಲ್ಲಿರುವ ಸುಬ್ರಹ್ಮಣ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಸಭಾದ ಅಧ್ಯಕ್ಷರಾದ ಡಾ. ಎ.ಪಿ. ಕೃಷ್ಣ ಇವರು ಉದ್ಘಾಟನೆ ಮಾಡಲಿದ್ದು, ಕೊಲ್ಯ ನಾಟ್ಯನಿಕೇತನದ ನೃತ್ಯ ನಿರ್ದೇಶಕರಾದ ವಿದುಷಿ ರಾಜಶ್ರೀ ಶೆಣೈ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5-30 ಗಂಟೆಗೆ ಕಲಾಸೂರ್ಯ ನೃತ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಬಳಿಕ ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ‘ತ್ರಿಶಕ್ತಿ’ ತ್ರಿಮಾತಾ ಸ್ವರೂಪಿಣಿ ದೇವಿಗೆ ನೃತ್ಯ ನಮನಕ್ಕೆ ನಟುವಾಂಗದಲ್ಲಿ ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ವಿ. ಮನೋಹರ್ ರಾವ್ ಮತ್ತು ಪಿಟೀಲಿನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಇವರುಗಳು ಸಹಕರಿಸಲಿದ್ದಾರೆ.

