ಮಂಗಳೂರು : ಅವಿನಾಶ್ ಫೋಕ್ ಡಾನ್ಸ್ ಮಂಗಳೂರು (ರಿ.) ಅರ್ಪಿಸುವ 3ನೇ ವರ್ಷದ ‘ಕಲಾಯನ’ ಜಾನಪದ ಜಾತ್ರೆ ನೃತ್ಯ ಸ್ಪರ್ಧೆಯನ್ನು ದಿನಾಂಕ 08 ಡಿಸೆಂಬರ್ 2024ರಂದು ಮಧ್ಯಾಹ್ನ 12-00 ಗಂಟೆಗೆ ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9980358774.
ಸ್ಪರ್ಧೆಯ ನಿಯಮಗಳು :
* ಪ್ರತೀ ತಂಡವು ಜಾನಪದ ಜಾತ್ರೆಯ ವಿಷಯವನ್ನಾಧರಿಸಿ ಜಾತ್ರಾ ಮಹೋತ್ಸವದ ಪ್ರಾತ್ಯಕ್ಷತೆ ಹಾಗೂ ಸಹಬಾಳ್ವೆಗೆ ಒತ್ತು ನೀಡಬೇಕು.
* ಪ್ರತಿಯೊಂದು ತಂಡಕ್ಕೂ 20 ನಿಮಿಷಗಳ ಕಾಲಾವಕಾಶ ನೀಡಲಾಗುವುದು.
* ತಂಡದಲ್ಲಿ ಕನಿಷ್ಠ 15 ಮಂದಿ ಗರಿಷ್ಠ 25 ಮಂದಿ.
* ಧ್ವನಿಸುರುಳಿಗೆ (ಸಿ.ಡಿ) ಗೆ ಅವಕಾಶವಿಲ್ಲ.
* ತಂಡಗಳು ನಿಗದಿಪಡಿಸಿದ ಸಮಯದಲ್ಲೇ ಪ್ರದರ್ಶನ ನೀಡಬೇಕು. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶ ಇರುವುದಿಲ್ಲ.
* ಸ್ಪರ್ಧೆಯಲ್ಲಿ ನೀರು, ಬೆಂಕಿ ಮತ್ತು ಸ್ಫೋಟಕ ಬಳಕೆ ನಿಷೇಧಿಸಲಾಗಿದೆ.
* ಅಶ್ಲೀಲ ಅಸಂಬದ್ಧ ಅಥವಾ ಜಾತಿ ಧರ್ಮಗಳ ಅವಹೇಳನಕ್ಕೆ ಅವಕಾಶವಿರುವುದಿಲ್ಲ.
* ಕಡ್ಡಾಯವಾಗಿ ದೈವಗಳ ಪಾತ್ರಕ್ಕೆ ಅವಕಾಶವಿಲ್ಲ.
* ಮುಕ್ತ ವಿಭಾಗದ ಸ್ಪರ್ಧೆ.
* ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.