ಇರಾ : ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.), ಕುಂಡಾವು ಇರಾ, ಉಳ್ಳಾಲ ತಾಲೂಕು ಮತ್ತು ಸುವರ್ಣ ಮಹೋತ್ಸವ ಸಮಿತಿ, ಯುವಕ ಮಂಡಲ (ರಿ.) ಇರಾ ಉಳ್ಳಾಲ ತಾಲೂಕು, ದ.ಕ. – ಇವರ ಜಂಟಿ ಆಶ್ರಯದಲ್ಲಿ ‘ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣಾ’ ಕಾರ್ಯಕ್ರಮ ದಿನಾಂಕ 29-10-2023ನೇ ಆದಿತ್ಯವಾರ ಅಪರಾಹ್ನ ಗಂಟೆ 2.00ರಿಂದ ಯಕ್ಷ ಕೈಲಾಸ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಯಲು ರಂಗಮಂದಿರ, ಕುಂಡಾವು ಇಲ್ಲಿ ನಡೆಯಿತು.
ಸಂಸ್ಮರಣಾ ಕಾರ್ಯಕ್ರಮದಲ್ಲಿ ಖ್ಯಾತ ಹಿಮ್ಮೇಳ ಕಲಾವಿದರಾದ ಶ್ರೀ ಪೆರುವಾಯಿ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರೂ, ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.) ಕುಂಡಾವು ಇರಾ ಇದರ ಗೌರವ ಅಧ್ಯಕ್ಷರೂ ಆದ ಕಲ್ಲಾಡಿ ಶ್ರೀ ದೇವಿ ಪ್ರಸಾದ್ ಶೆಟ್ಟಿ, ಆಡಳಿತ ಸಮಿತಿಯ ಸದಸ್ಯರೂ, ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲ (ರಿ.) ಇರಾ ಇದರ ಪ್ರಧಾನ ಸಂಚಾಲಕರೂ ಆದ ಶ್ರೀ ಜಗದೀಶ್ ಶೆಟ್ಟಿ ಇರಾ ಗುತ್ತು, ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲ (ರಿ.) ಇರಾ ಇದರ ಗೌರವಾಧ್ಯಕ್ಷರಾದ ಶ್ರೀ ಪಿ.ಎಂ. ಕೊಡಂಗೆ, ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.) ಇರಾ ಇದರ ಅಧ್ಯಕ್ಷರೂ, ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲ (ರಿ.) ಇರಾ ಇದರ ಅಧ್ಯಕ್ಷರೂ ಆದ ಶ್ರೀ ಜಯರಾಮ್ ಪೂಜಾರಿ ಸೂತ್ರಬೈಲು, ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.) ಇರಾ ಇದರ ಕಾರ್ಯದರ್ಶಿಗಳೂ, ಯುವಕ ಮಂಡಲ (ರಿ.) ಇದರ ಅಧ್ಯಕ್ಷರೂ ಆದ ಶ್ರೀ ಗಣೇಶ್ ಕೊಟ್ಟಾರಿ ಸಂಪಿಲ, ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲ (ರಿ.) ಇರಾ ಇದರ ಕಾರ್ಯದರ್ಶಿಗಳಾದ ಶ್ರೀ ಸುರೇಶ್ ರೈ ಪರ್ಲಡ್ಕ, ಸೇವಾ ಸಮಿತಿ ಹಾಗೂ ಯುವಕ ಮಂಡಲ (ರಿ.) ಇರಾ ಇದರ ಕಾರ್ಯದರ್ಶಿಗಳಾದ ಶ್ರೀ ಜಯರಾಜ್ ಶೆಟ್ಟಿ ಕುಂಡಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲದ ಸಾಂಸ್ಕೃತಿಕ ಕಾರ್ಯದರ್ಶಿಗಳೂ, ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.) ಇರಾ ಇದರ ಕೋಶಾಧಿಕಾರಿಗಳಾದ ಶ್ರೀ ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿನ ಸದಸ್ಯರೂ, ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲದ ಉಪಾಧ್ಯಕ್ಷರೂ ಆದ ಶ್ರೀ ಯತಿರಾಜ್ ಶೆಟ್ಟಿ ಸಂಪಿಲ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟಿನ ಸದಸ್ಯರೂ, ಯುವಕ ಮಂಡಲದ ಹಿರಿಯ ಸದಸ್ಯರಾದ ಶ್ರೀ ಸುರೇಶ್ ಕೊಟ್ಟಾರಿ ಸಂಸ್ಮರಣಾ ಭಾಷಣ ಮಾಡಿದರು.
ನಂತರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ‘ಪಂಚವಟಿ’ ಹಾಗೂ ‘ಇಂದ್ರಜಿತು’ ಯಕ್ಷಗಾನ ಬಯಲಾಟ ನಡೆಯಿತು. ಅತಿಥಿ ಭಾಗವತರಾಗಿ ಶ್ರೀ ಬಲಿಪ ಶಿವಶಂಕರ ಭಟ್ ಹಾಗು ಮುಮ್ಮೇಳ ಕಲಾವಿದರಾಗಿ ಶ್ರೀ ತಾರನಾಥ ಬಲ್ಯಾಯ ಇವರು ಭಾಗವಹಿಸಿದ್ದರು. ರಾತ್ರಿ ಗಂಟೆ 7.30ಕ್ಕೆ ತುಳು ಸಾಮಾಜಿಕ ನಾಟಕ ಯುವಕ ಮಂಡಲ (ರಿ.) ಇರಾ ಇದರ ಹೆಮ್ಮೆಯ ಕಲಾವಿದರಿಂದ ಡಾ. ಸಂಜೀವ ದಂಡಕೇರಿ ವಿರಚಿತ ತುಳುನಾಡ ರತ್ನ ಶ್ರೀ ದಿನೇಶ್ ಅತ್ತಾವರ ಇದರ ದಕ್ಷ ನಿರ್ದೇಶನ ಮತ್ತು ನಟನೆಯ ‘ಬಯ್ಯ ಮಲ್ಲಿಗೆ’ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.