ಮಂಗಳೂರು : ನಾಟ್ಯಾಲಯ ಉರ್ವ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸುವ ಕೀರ್ತಿಶೇಷ ಕರ್ನಾಟಕ ಕಲಾಶ್ರೀ ವಿದುಷಿ ಕಮಲ ಭಟ್ ಸಂಸ್ಮರಣೆಯೊಂದಿಗೆ ‘ಕಮಲಾಂಜಲಿ’ ಕಾರ್ಯಕ್ರಮವನ್ನು ದಿನಾಂಕ 10 ಮತ್ತು 12 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಕರಂಗಲ್ಪಾಡಿ ಸುಬ್ರಹ್ಮಣ್ಯ ಸಭಾದಲ್ಲಿ ಆಯೋಜಿಸಲಾಗಿದೆ.
ದಿನಾಂಕ 10 ಏಪ್ರಿಲ್ 2025ರಂದು ಗುರು ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಭರತಾಂಜಲಿ (ರಿ.) ಕೊಟ್ಟಾರ ಇದರ ನಿರ್ದೇಶಕರಾದ ಗುರು ಶ್ರೀ ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರತಿಮಾ ಶ್ರೀಧರ ಹಾಗೂ ಕಲಾ ಪೋಷಕರಾದ ಮಾಧವ ಎಂ.ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದಿನಾಂಕ 12 ಏಪ್ರಿಲ್ 2025ರಂದು ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ನಾಟ್ಯನಿಕೇತನದ ಗುರು ವಿದುಷಿ ರಾಜಶ್ರೀ ಉಳ್ಳಾಲ್ ಇವರು ನೆರವೇರಿಸಲಿದ್ದು, ಸನಾತನ ನಾಟ್ಯಾಲಯದ ಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ಪಿ.ಡಿ.ಸಿ. ಶ್ರೀಮತಿ ಚಿತ್ರಾ ವಿ. ರಾವ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ನೃತ್ಯ ವೈಭವ’ ಪ್ರಸ್ತುತಗೊಳ್ಳಲಿದೆ.