ಬೆಂಗಳೂರು: ದಿನಾಂಕ 18-06-2023ರಂದು ಬೆಂಗಳೂರಿನ ಜೆ. ಪಿ. ನಗರದ ರಂಗಶಂಕರದಲ್ಲಿ ಸಂಚಯ ಪ್ರಸ್ತುತ ಪಡಿಸುವ ‘ ಕಾಮ ರೂಪಿಗಳ್ ‘ನಾಟಕವು ಪ್ರದರ್ಶನಗೊಳ್ಳಲಿದೆ. ಹಲವು ರಾಮಾಯಣ ಕೃತಿಗಳನ್ನು ಆಧರಿಸಿರುವ ಈ ನಾಟಕವನ್ನು ಖ್ಯಾತ ರಂಗನಿರ್ದೇಶಕ ಗಣೇಶ್ ಮಂದಾರ್ತಿಯವರು ರಂಗರೂಪಕ್ಕೆ ತರುವುದರೊಂದಿಗೆ ನಿರ್ದೇಶನವನ್ನೂ ಮಾಡಿದ್ದಾರೆ.
ನಾಟಕದ ಬಗ್ಗೆ:
ರಾಮಾಯಣದ ಪಂಚವಟಿಯ ಭಾಗದ ಕಥೆಯನ್ನೊಳಗೊಂಡ ನಾಟಕ ಇದು. ಶೂರ್ಪನಖಿಯ ಮಾನಭಂಗದಿಂದ ಹಿಡಿದು ಜಟಾಯು ಮೋಕ್ಷದವರೆಗಿನ ಕಥೆಯನ್ನು ಆರಿಸಿ ಕಟ್ಟಲಾಗಿದೆ. ರಾಮಾಯಣದಲ್ಲೇ ಬಹು ರಂಜಕವೂ ನಾಟಕೀಯವೂ ಆದ ಈ ಭಾಗವನ್ನು ತುಸು ಆಧುನೀಕರಣಗೊಳಿಸಿ ಪ್ರೇಕ್ಷಕರ ಮುಂದಿಡುತ್ತಿದ್ದಾರೆ. ಬದುಕಿಗೊಂದು ಚೌಕಟ್ಟಿದೆ, ಕಾಮಕ್ಕೊಂದು ಎಲ್ಲೆ ಇದೆ. ಮಿತಿಮೀರಿದರೆ ಏನೆಲ್ಲ ಆಪತ್ತು ಘಟಿಸಬಹುದೆಂಬುದಕ್ಕೆ ಈ ಪಂಚವಟಿಯ ಕಥೆಯು ನಮ್ಮನ್ನು ಸದಾ ಎಚ್ಚರಿಸುತ್ತಿರುತ್ತದೆ