ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರ ಇದರ ವತಿಯಿಂದ ‘ಕನಕ ಕೀರ್ತನ ಗಂಗೋತ್ರಿ’ ಕಾರ್ಯಕ್ರಮವು ದಿನಾಂಕ 31-01-2024ರಂದು ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.
ಕೀರ್ತನ ಗಾಯನವು ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ, ಅಧ್ಯಾಪಕ, ಅಧ್ಯಾಪಕೇತರ ಹಾಗೂ ಸಾರ್ವಜನಿಕ ಹೀಗೆ 7 ವಿಭಾಗಗಳಲ್ಲಿ ನಡೆಯಲಿದೆ. ಆಸಕ್ತರು ದಿನಾಂಕ 30-01-2024ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರತಿ ವಿಭಾಗದಲ್ಲಿ ಆಯ್ಕೆಯಾದ ಮೂವರು ಅಭ್ಯರ್ಥಿಗಳಿಗೆ ಮತ್ತು ಮೂರು ತಂಡಗಳಿಗೆ ತಲಾ ರೂಪಾಯಿ ಎರಡು ಸಾವಿರ ನಗದು ಬಹುಮಾನ ಇರಲಿದೆ. ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆಯುವ ‘ಕನಕ ಸ್ಮೃತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ [email protected] ಅಥವಾ ವಾಟ್ಸ್ಆ್ಯಪ್ – 8310300875 / 9632346126 ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಧನಂಜಯ ಕುಂಬ್ಳೆ ತಿಳಿಸಿದ್ದಾರೆ.