Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಲೋಕಾರ್ಪಣೆಗೊಂಡ ‘ಕನಕ-ಪುರಂದರ’ ಕೃತಿ 
    Book Release

    ಲೋಕಾರ್ಪಣೆಗೊಂಡ ‘ಕನಕ-ಪುರಂದರ’ ಕೃತಿ 

    November 13, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಂಗಳೂರು :  ಹಿರಿಯ ರಂಗ ನಿರ್ದೇಶಕ ಮೋಹನಚಂದ್ರ ಯು. ಇವರು ರಚಿಸಿದ ನಾಟಕ ಕೃತಿ ‘ಕನಕ-ಪುರಂದರ’ ಇದರ  ಲೋಕಾರ್ಪಣಾ ಸಮಾರಂಭವು ದಿನಾಂಕ 07 ನವೆಂಬರ್ 2024ರಂದು  ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಾನ್ನಿಧ್ಯ ಸಭಾಂಗಣದಲ್ಲಿ ನಡೆಯಿತು.
    ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ, ಆಯನ ನಾಟಕದ ಮನೆ, ಮಂಗಳೂರು ಮತ್ತು ಹೊಸಪೇಟೆಯ ಯಾಜಿ ಪ್ರಕಾಶನದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕವಿ, ಕಥೆಗಾರ ಹಾಗೂ ಕಾಕಲ್ ಪೌಂಡೇಶನ್ ಇದರ ಟ್ರಸ್ಟಿಚಂದ್ರಶೇಖರ್ ಕಾಕಲ್ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವ ಡಾ. ಆಲ್ವಿನ್ ಡೇಸಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ರಂಗನಟ ಮತ್ತು ರಂಗ ನಿರ್ದೇಶಕ ಡಾ.  ನರಸಿಂಹಮೂರ್ತಿ ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಸಂಶುದ್ದೀನ್ ಇವರು ರಂಗಪಠ್ಯದ ಪರಿಚಯ ಮಾಡಿದರು. ರಂಗ ಸಂಗೀತ ಸಂಯೋಜಕ ಶೀನಾ ನಾಡೋಳಿ ‘ಕನಕ-ಪುರಂದರ’ ರಂಗಪಠ್ಯದಲ್ಲಿ ಬರುವ ಕನಕ-ಪುರಂದರರ ಕೀರ್ತನೆಗಳಿಗೆ ರಾಗ ಸಂಯೋಜಿಸಿ ಹಾಡಿದರು.
    ಯಾಜಿ ಪ್ರಕಾಶನದ ಆಡಳಿತ ನಿರ್ದೇಶಕಿ ಸವಿತಾ ಯಾಜಿ, ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ ಯಾಜಿ, ಹಿರಿಯ ರಂಗ ತಜ್ಞ ಐ. ಕೆ. ಬೊಳುವಾರು, ಆಯನ ನಾಟಕದ ಮನೆಯ ಸಂಸ್ಥಾಪಕ ಸದಸ್ಯ ಶ್ಯಾಮಸುಂದರ್ ರಾವ್, ಪ್ರಭಾಕರ್ ಕಾಪಿಕಾಡ್, ನಟ ಚಂದ್ರಹಾಸ್ ಉಳ್ಳಾಲ ಪಾಲ್ಗೊಂಡಿದ್ದರು. ಸಂತ ಅಲೋಶಿಯಸ್ ಪರಿಗಣಿತ ವಿ. ವಿ. ಇದರ ಡಾ. ದಿನೇಶ್ ನಾಯಕ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಹಾಗೂ ನಿರೂಪಿಸಿ, ಕೃತಿಕಾರ ಮೋಹನಚಂದ್ರ ಯು. ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ತುಳು ಭವನದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ | ನವೆಂಬರ್ 13
    Next Article ಹೆಬ್ರಿಯ ಹೆಬ್ಬೇರಿ ಯಕ್ಷಲೋಕದ 5ನೇ ವಾರ್ಷಿಕೋತ್ಸವ
    roovari

    Add Comment Cancel Reply


    Related Posts

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ವಿಶೇಷ ಲೇಖನ – ಜೈನ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಎಸ್. ಪಿ. ಪಾಟೀಲ್

    May 31, 2025

    ಮೈಸೂರಿನಲ್ಲಿ ಸಿತಾರ್ ವಾದನ, ಪುಸ್ತಕ ಲೋಕಾರ್ಪಣೆ ಮತ್ತು ಸಿತಾರ್ ತರಗತಿಗಳ ಪ್ರಾರಂಭೋತ್ಸವ | ಮೇ 31

    May 30, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.