ಮೈಸೂರು : ನಟನ ರಂಗಶಾಲೆಯ ವತಿಯಿಂದ ನಡೆಯುವ ಸುಬ್ಬಣ್ಣ ಸ್ಮರಣೆ 2025 ಪ್ರಯುಕ್ತ ನಟನ ಪಯಣ ರೆಪರ್ಟರಿ ತಂಡದ ಪ್ರಯೋಗ ‘ಕಣಿವೆಯ ಹಾಡು’ ನಾಟಕ ಪ್ರದರ್ಶನವನ್ನು ದಿನಾಂಕ 20 ಜುಲೈ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ನಾಟಕದ ಮೂಲ ರಚನೆ ಅತೊಲ್ ಫ್ಯೂಗಾರ್ಡ್ ಇವರದ್ದು, ಕನ್ನಡಕ್ಕೆ ಡಾ. ಮೀರಾ ಮೂರ್ತಿ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಇವರು ಸಂಗೀತ ನೀಡಿದ್ದು, ಡಾ. ಶ್ರೀಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.