ಕೋಲಾರ : ‘ಸ್ವರ್ಣಭೂಮಿ ಫೌಂಡೇಷನ್’ ಕೋಲಾರ ಇದರ ವತಿಯಿಂದ ಹಾಗೂ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ ಮತ್ತು ರೋಟರಿ ಕ್ಲಬ್ ಕೋಲಾರ ಇವುಗಳ ಸಂಯುಕ್ತಾಶ್ರಯದಲ್ಲಿ ‘ಕಾಸರಗೋಡು – ಕೋಲಾರ ಕನ್ನಡ ಉತ್ಸವ 2024 ಹಾಗೂ ರಾಷ್ಟ್ರ ಕವಿ ಕುವೆಂಪು ಇವರ ಜನ್ಮದಿನದ ಪ್ರಯುಕ್ತ ವಿಶ್ವಮಾನವ ದಿನಾಚರಣೆ’ಯನ್ನು ದಿನಾಂಕ 28 ಡಿಸೆಂಬರ್ 2024ರಂದು ಮಧ್ಯಾಹ್ನ ಗಂಟೆ 2-30ಕ್ಕೆ ಕೋಲಾರ ಅಂತರಗಂಗೆ ಮುಖ್ಯ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ, ಪುಸ್ತಕ ಲೋಕಾರ್ಪಣೆ, ಗೀತ ಗಾಯನ ಮತ್ತು ಸಾಂಸ್ಕೃತಿಕ ಸಂಭ್ರಮ ನಡೆಯಲಿದ್ದು, ಅದರೊಂದಿಗೆ ಕಾಸರಗೋಡು ಕನ್ನಡ ಭವನದ ರಾಜ್ಯಾಂತರ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಪ್ರಶಸ್ತಿ -2024’, ‘ಕುವೆಂಪು ವಿಶ್ವಮಾನವ ಕನ್ನಡರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.