ಕಾಸರಗೋಡು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ
ಮಂಗಳೂರು ಇದರ ಆಶ್ರಯದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ‘ಕನ್ನಡ ಕಲರವ’ ಸಾಂಸ್ಕೃತಿಕ ಉತ್ಸವ ಗಡಿನಾಡಿನಲ್ಲಿ ದಿನಾಂಕ 08-10-2023ರ ಭಾನವಾರದಂದು ನಡೆಯಲಿದೆ.
ಕಾಸರಗೋಡಿನ ತಾಳಿಪಡ್ಪುವಿನಲ್ಲಿರುವ ಹೊಟೇಲ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಾನ್ಯ ನ್ಯಾಯವಾದಿಗಳು ಮತ್ತು ಕಾಂಗ್ರೆಸ್ ಮುಖಂಡರಾದ ಶ್ರೀ ಎಂ. ಗುರುಪ್ರಸಾದ್ ಮಂಡ್ಯ ಉದ್ಘಾಟಿಸಲಿದ್ದು, ಕೆ.ಎಸ್.ಎಸ್.ಎ.ಪಿ ಇದರ ಅಧ್ಯಕ್ಷರಾದ ಶ್ರೀಮತಿ ರಾಣಿ ಮುಪ್ಪಲತಾ ದೇವಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ಮತ್ತಿಹಳ್ಳಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಪೈವಳಿಕೆ ಗ್ರಾಮ ಪಂಚಾಯತಿನ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಝಲ್ಪಿಕರ್ ಅಲಿ, ವಿಜಯಕರ್ನಾಟಕಪತ್ರಿಕೆಯ ಕಾಸರಗೋಡಿನ ಜಿಲ್ಲಾ ವರದಿಗಾರರಾದ ಶ್ರೀ ಗಂಗಾಧರ್ ಯಾದವ್ ಹಾಗೂ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಶಿವರಾಂ ಕಾಸರಗೋಡು ಇವರನ್ನು ಸನ್ಮಾನಿಸಲಾಗುವುದು.
‘ಕಾಸರಗೋಡಿನಲ್ಲಿ ಕನ್ನಡ ಹೋರಾಟ’ ಎಂಬ ವಿಷಯದಲ್ಲಿ ಕವಿ ಮತ್ತು ಸಾಹಿತಿಗಳಾದ ಶ್ರೀ ರಾಧಾಕೃಷ್ಣ ಕೆ. ಉಳಿಯತಡ್ಕ ಹಾಗೂ ‘ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿಗಳು’ ಎಂಬ ವಿಷಯದಲ್ಲಿ ಕೇಂದ್ರೀಯ ವಿದ್ಯಾಲಯದ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಎನ್. ಭಟ್ ಸೈಪಂಗಲ್ಲು ಉಪನ್ಯಾಸ ನೀಡಲಿದ್ದು, ರಾಜ್ಯಮಟ್ಟದ ಕವಿಗೋಷ್ಠಿಯು ಪೈವಳಿಕೆ ಪಿ.ಯು ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ಬೇ.ಸಿ ಗೋಪಾಲಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದ ಬಳಿಕ ಶ್ರೀಮತಿ ಸೌಮ್ಯ ಶ್ರೀಕಾಂತ್ ಮತ್ತು ಸೌರಮ್ಯ ಸೈಜು ಮಧೂರು ಮತ್ತು ತಂಡದವರಿಂದ ‘ನಾಟ್ಯ ಸಿಂಚನ’, ಶ್ರೀರಕ್ಷಾ ಸರ್ಪಂಗಳ ಮತ್ತು ತಂಡದವರಿಂದ ಗೀತಗಾಯನ ಮತ್ತು ಸಮೂಹಗಾನ ಹಾಗೂ ಡಾ.ವಾಣಿಶ್ರೀ ಮತ್ತು ಗುರುರಾಜ್ ನೇತೃತ್ವದ ಗಡಿನಾಡ ಸಾಂಸ್ಕೃತಿಕ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.