ಧಾರವಾಡ : ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್ ಧಾರವಾಡ, ಬಿ. ಜಿ. ಜೋಶಿ ಮೊಮೋರಿಯಲ್ ಟ್ರಸ್ಟ್ ಧಾರವಾಡ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಧಾರವಾಡ, ಗೊಂಬೆಮನೆ ಧಾರವಾಡ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುವ ‘ಕನ್ನಡ ಕಾವ್ಯ ಕಸ್ತೂರಿ’ ಮಕ್ಕಳ ರಂಗ – ಸಂಸ್ಕೃತಿ ಶಿಬಿರವು ದಿನಾಂಕ 21 ಏಪ್ರಿಲ್ 2025 ರಿಂದ 11 ಮೇ 2025ರ ವರೆಗೆ ಧಾರವಾಡದ ಸೃಜನಾ ಡಾ. ಅಣ್ಣಾಜಿರಾವ ಸಿರೂರ ರಂಗಮಂದಿರದ ಆವರಣದಲ್ಲಿ ನಡೆಯಲಿದೆ.
ನಟ, ನಿರ್ದೇಶಕ, ನಾಟಕಕಾರ ಹಾಗೂ , ಧಾರವಾಡ ರಂಗಾಯಣದ ಮಾಜಿ ನಿರ್ದೇಶಕರಾದ ಡಾ. ಪ್ರಕಾಶ ಗರುಡ ಇವರ ನಿರ್ದೇಶನದಲ್ಲಿ 10 ರಿಂದ 14 ವಯಸ್ಸಿನ ಮಕ್ಕಳಿಗಾಗಿ ನಡೆಯಲಿರುವ ಈ ಶಿಬಿರವು ಪ್ರತಿದಿನ ಬೆಳಿಗ್ಗೆ ಘಂಟೆ 9.30 ರಿಂದ ಮದ್ಯಾನ್ಹ ಘಂಟೆ 1.30ರ ವರೆಗೆ ನಡೆಯಲಿದೆ.
• ಈ ಶಿಬಿರದಲ್ಲಿ ಮಕ್ಕಳಿಗಾಗಿ ‘ಕೇಳು’ ಮತ್ತು ‘ನೋಡು’ ಸಂಸ್ಕೃತಿಗಳನ್ನು ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಡಲಾಗುತ್ತದೆ.
• ಚಿತ್ರಕಲೆ: ಮಕ್ಕಳೇ ಕಥೆ-ಕಾವ್ಯ ಹೇಳಿ ಅವುಗಳಿಗೆ ಚಿತ್ರಗಳನ್ನ ಬಿಡಿಸುತ್ತಾರೆ.
• ಛಾಯಾಚಿತ್ರ (photography) ಕಲಾ ಪರಿಚಯ : ಮಕ್ಕಳೇ ಛಾಯಾ ಚಿತ್ರಗಳನ್ನು ತೆಗೆದು ಅದಕ್ಕೆ ಕಥೆ -ಪದ್ಯ ರಚಿಸುತ್ತಾರೆ.
• ರಂಗಾಟ ಮತ್ತು ಕೋಲಾಟ : ದೈಹಿಕ ಸ್ವಾಸ್ಥ್ಯಕ್ಕೆ ಈ ಚಟುವಟಿಕೆಗಳು.
• ಕನ್ನಡ ಸಾಹಿತಿಗಳ ಕುರಿತ ಹಾಗೂ ಮಕ್ಕಳ ಸಾಕ್ಷಚಿತ್ರಗಳ (documentary) ಪ್ರದರ್ಶನ.
• ನಮ್ಮ ಸುತ್ತಮುತ್ತಲಿನ ಸಾಹಿತಿಗಳು, ಸಂಗೀತಗಾರರು. ಕಲಾವಿದರು ಮತ್ತು ಇತರರೊಂದಿಗೆ ಮಾತುಕತೆ.
• ಪಾರಂಪರಿಕ ನಡಿಗೆ (Heritage walk) : ಮಕ್ಕಳಿಗೆ ಸಾಂಸ್ಕೃತಿಕವಾಗಿ ಮಹತ್ವವುಳ್ಳ ಧಾರವಾಡದಲ್ಲಿನ ಸ್ಥಳಗಳ ವೀಕ್ಷಣೆ
ಶಿಬಿರದ ಕೊನೆಗೆ ಮಕ್ಕಳಿಂದ ಕನ್ನಡ ಕಾವ್ಯ-ಪದ್ಯಗಳ ಸಾ ಅಭಿನಯ, ವಾಚನ, ಗಾಯನ, ಚಲನೆಗಳ ಮೂಲಕ ಕನ್ನಡ ಕಾವ್ಯ-ಕಥಾ ರಂಗ ಪ್ರಯೋಗಗಳು ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಡಾ ಪ್ರಕಾಶ ಗರುಡ – 9343100135, ಡಾ. ಕೃಷ್ಣ ಕಟ್ಟಿ – 94485 80056, ಶ್ರೀ ಹನುಮೇಶ ಸಕ್ಕರಿ – 9448436023, ಡಾ. ಶಶಿಧರ ನರೇಂದ್ರ – 9448901846, ಶ್ರೀ ಸಮೀರ ಜೋಶಿ – 9845447002 ಇವರನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಕನ್ನಡ ಕಾವ್ಯ ಕಸ್ತೂರಿ’ ಮಕ್ಕಳ ರಂಗ – ಸಂಸ್ಕೃತಿ ಶಿಬಿರ | ಏಪ್ರಿಲ್ 21
No Comments1 Min Read