ಮಂಗಳೂರು : ಮಂಗಳೂರಿನ ಟಿ.ಎಂ.ಎ. ಪೈ ಇಂಟನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ಕನ್ನಡ ಸಾಹಿತ್ಯ ವಿಮರ್ಶೆ – ಒಂದು ಅಕಾಡೆಮಿಕ್ ಚರ್ಚೆ’ಯು ಎರಡನೇ ಸಭಾಂಗಣದಲ್ಲಿ ದಿನಾಂಕ 11 ಜನವರಿ 2025ರಂದು ನಡೆಯಿತು.
ಈ ಚರ್ಚೆಯನ್ನು ಸಂವಾಹಕರಾಗಿ ಡ. ಕಾಖಂಡಕಿ ಹೆಚ್.ವಿ. ಅವರು ನಡೆಸಿಕೊಟ್ಟರು. ಈ ಚರ್ಚಾ ಫಲಕದಲ್ಲಿ ಡಾ. ಜಿ.ಬಿ. ಹರೀಶ್, ಡಾ. ಎನ್.ಎಸ್. ಗುಂಡೂರು ಹಾಗೂ ಡಾ. ಶಾಮಸುಂದರ ಖಿದರಕುಂದಿ ಭಾಗವಹಿಸಿದರು.
ಡಾ. ಜಿ. ಬಿ. ಹರೀಶ್ :
ಬರಹಗಾರರಾಗಿರುವ ಇವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಜೈನ್ ಮತ್ತು ಪ್ರಾಕೃತ ಭಾಷೆಯ ಪರಂಪರೆಯ ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿ ದೊರಕಿದೆ.
ಡಾ. ಎನ್. ಎಸ್. ಗುಂಡೂರು :
ಶ್ರೀಯುತರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ಇವರಿಗೆ ಕರ್ನಾಟಕ ವಿಶ್ವವಿದ್ಯಾನಿಲಯದಿಂದ 2004ರಲ್ಲಿ ವಿಭಜನೆಯ ಕಾದಂಬರಿಗಳ ಕುರಿತು ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿ ದೊರಕಿದೆ.
ಡಾ. ಶಾಮಸುಂದರ ಖಿದರಕುಂದಿ :
ಗದಗಿನ ಎ. ಎಸ್. ಏಸ್. ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದು ನಿವೃತ್ತಿ ಹೊಂದಿದ್ದಾರೆ. ಇವರ ಹಲವಾರು ಪುಸ್ತಕಗಳು ಲೋಕರ್ಪಣೆಗೊಂಡಿದೆ. ಇವರು ಡಾ. ದ.ರಾ. ಬೇಂದ್ರೆ ನ್ಯಾಷನಲ್ ಮೆಮೋರಿಯಲ್ ಟ್ರಸ್ಟ್ ಇದರ ಅಧ್ಯಕ್ಷರಾಗಿದ್ದಾರೆ.
ಗೋಷ್ಠಿಯು ಸಂವಾಹಕರು ಕನ್ನಡ ಸಾಹಿತ್ಯದ ಚಾರಿತ್ರಿಕ ಬೆಳವಣಿಗೆ, ವಿಮರ್ಶೆಯ ಅರ್ಥ ಮತ್ತು ಅವಶ್ಯಕತೆ ಕುರಿತ ಚರ್ಚೆಗೆ ವೇದಿಕೆ ಮಾಡಿಕೊಟ್ಟರು. ಕವಿರಾಜಮಾರ್ಗದಿಂದ ಆರಂಭವಾದ ಕನ್ನಡ ವಿಮರ್ಶೆ ನಿರಂತರವಾಗಿ ವಿಕಾಸವಾಗುತ್ತಿರುವ ವಿಷಯವಾಗಿದ್ದು, ಇಂದಿನ ಸಾಹಿತ್ಯದಲ್ಲಿಯೂ ಅದರ ಪ್ರಾಮುಖ್ಯತೆ ಜೀವಂತವಾಗಿರುವುದನ್ನು ವಿವರಿಸಲಾಯಿತು. ವಿಚಾರ ಸಂಕಿರಣವು ಡಾ. ಆಮೂಲ್ ಅವರ ಗ್ರಂಥಸೃಷ್ಟಿ, ಸಾಧನೆ ಮತ್ತು ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಯ ಮಹತ್ವವನ್ನು ಉತ್ತೇಜಿತಗೊಳಿಸಿತು.
ಡ. ಶ್ಯಾಮಸುಂದರ್ ಬಿದರಕುಂದಿ ಅವರು “ಸಾಹಿತ್ಯವನ್ನು ಅಭ್ಯಾಸ ಮಾಡುವುದು ಅತ್ಯಂತ ಮುಖ್ಯವಾಗಿದೆ. ಇಂಗ್ಲೀಷ್ ನಲ್ಲಿ ಬಂದಂತಹ ಸಾಹಿತ್ಯವು ವೈಯಕ್ತಿಕ ಹಾಗೂ ಧಾರ್ಮಿಕ ನೈತಿಕತೆಗಳನ್ನು ಆಧರಿಸಿತ್ತು. ಆದರೆ ಹೊಸ ಕಾಲದಲ್ಲಿ ಸಾಹಿತ್ಯವು ಸಮಾಜವನ್ನು, ದೇಶವನ್ನು ಮತ್ತು ಜನತೆಯ ಸ್ಥಿತಿಗತಿಗಳನ್ನು ಉತ್ತಮಗೊಳಿಸಲು ಪ್ರಯತ್ನಿಸಿದೆ. ಇದು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸವಾಗಿ ಪ್ರಾರಂಭವಾಗಿದೆ. ಇದರ ಪರಿಣಾಮವಾಗಿ ಹೊಸ ಗ್ರಹಿಕೆ, ವಿಮರ್ಶೆಗೆ ಹೊಸ ದಿಕ್ಕುಗಳು ಶುರುವಾಯಿತು. ಮಂಗಳೂರು, ಗೋವಿಂದ ಪೈ ಸೇರಿದಂತೆ ಬಹುಭಾಷಿಕ ಸಾಹಿತಿಗಳು ಈ ಪರಿಕಲ್ಪನೆಗಳನ್ನು ಅನುಸರಿಸಿ, ಸ್ಥಳೀಯ ಭಾಷೆಗಳಲ್ಲಿಯೂ ಸಾಹಿತ್ಯವನ್ನು ರೂಪಿಸಿದರು” ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಡಾ. ಜಿ.ಬಿ. ಹರೀಶ್ ಇವರು ಕನ್ನಡ ಸಾಹಿತ್ಯ ಮತ್ತು ಅದರ ವಿಮರ್ಶೆಯ ಪ್ರಗತಿ ಮತ್ತು ಮಹತ್ವವನ್ನು ವಿವರಿಸಿದರು. “ಗೋವಿಂದ ಪೈ, ಬೇಂದ್ರೆ, ಬಿ.ಎಂ. ಶ್ರೀ ಅವರು ಕನ್ನಡ ಸಾಹಿತ್ಯವನ್ನು ರೂಪಿಸಿದ ಪ್ರಮುಖ ವ್ಯಕ್ತಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಈ ಲೇಖಕರು ಪಾಶ್ಚಾತ್ಯ ಚಿಂತನೆಗಳಿಂದ ಪ್ರೇರಿತವಾದರು ಮತ್ತು ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಹೊಸ ರೀತಿಯ ಸಾಹಿತ್ಯವನ್ನು ಸೃಷ್ಟಿಸಿದರು.” ಗ್ರೀಕ್ ಸಾಹಿತ್ಯ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿ ಕನ್ನಡ ಸಾಹಿತ್ಯವನ್ನು ವಿಶ್ಲೇಷಿಸುವ ಮಹತ್ವದ ಬಗ್ಗೆ ಪ್ರಸ್ತಾಪಿಸಿದರು. ಅವರು ಕನ್ನಡದಲ್ಲಿ ಹೊಸ ರೀತಿಯ ಸಾಹಿತ್ಯ ರೂಪಗಳನ್ನು ಹೇಗೆ ರೂಪಿಸಿದರೆಂದು ವಿವರಿಸುತ್ತ, ಅದರಲ್ಲಿ ಕವನ, ನಾಟಕ ಮತ್ತು ಸಣ್ಣಕಥೆಗಳು ಸೇರಿರುವ ಬಗ್ಗೆ ತಿಳಿಸಿದರು. ಕನ್ನಡ ಸಾಹಿತ್ಯ ವಿಮರ್ಶೆ ಮುಂದುವರಿದಂತೆ ಸಾಹಿತ್ಯ ಮತ್ತು ವಿಮರ್ಶೆಯ ನಡುವಿನ ಸಂಬಂಧವನ್ನು ವಿವರಿಸಿದರು. ವಿಮರ್ಶೆ ಮತ್ತು ಕಾವ್ಯ ಎರಡು ಪರಸ್ಪರ ಬೆಳೆದು ಕನ್ನಡ ಸಾಹಿತ್ಯವನ್ನು ಪ್ರಗತಿಪಡಿಸುವ ತಮ್ಮ ಅಭಿಲಾಷೆಯನ್ನು ಹೇಳಿಕೊಂಡರು.
ಡಾ. ಎನ್.ಎಸ್. ಗುಂಡೂರ್ ಅವರು “ನಾಕುತಂತಿ ನಾಲ್ಕು ಅಂಶಗಳನ್ನ ಕೇಂದ್ರೀಕರಿಸುವ ಕವಿತೆಗಳನ್ನು ಹೊಂದಿದೆ, ಅವು ನಾನು, ನೀನು, ಆನು ಮತ್ತು ತಾನು ಅದ್ವೆತ ಸಿದ್ಧಾಂತದ ಪ್ರಕಾರ ಇವು ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿಯ ನಾಲ್ಕು ಹಂತಗಳು. ಕನ್ನಡ ಸಾಹಿತ್ಯದ ಕೃತಿಗಳು ನಿರಂಜನರ ಬಗ್ಗೆ ಬರೆಯೋವಾಗ, ನಿರಂಜನರ ಕೃತಿಗಳು ಕುವೆಂಪು ಅವರ ಬಗ್ಗೆ ಬರೆಯೋವಾಗ, ಕುವೆಂಪು ಅವರ ಕೃತಿಗಳು ಟೇಬಲ್ ಮೇಲೆ ಇರ್ಬೇಕು, ಓದಬೇಕು, ಆಮೇಲೆ ಬರೆಯೋಕೆ ಪ್ರಾರಂಭ ಮಾಡಬೇಕು” ಎಂದು ಹೇಳಿದರು.