Subscribe to Updates

    Get the latest creative news from FooBar about art, design and business.

    What's Hot

    ‘ನುಡಿ ತೋರಣ’ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೆಂಗಳೂರು ಇದರ ತ್ರೈವಾರ್ಷಿಕ ಸಾಹಿತ್ಯ ಸಮಾವೇಶ -2025 | ಜೂನ್ 29

    June 28, 2025

    ಪಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷ ಶಿಕ್ಷಣ ಅಭಿಯಾನ

    June 28, 2025

    ಬೆಸೆಂಟ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ 106ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

    June 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯಲ್ಲಿ “ಕನ್ನಡ ಮಾತನಾಡು”
    Kannada

    ಉಡುಪಿಯಲ್ಲಿ “ಕನ್ನಡ ಮಾತನಾಡು”

    April 10, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    10 ಏಪ್ರಿಲ್ 2023, ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ ಉಡುಪಿ ಜಂಟಿಯಾಗಿ ಏರ್ಪಡಿಸಿದ್ದ “ಕನ್ನಡ ಮಾತನಾಡು” ಕಾರ್ಯಕ್ರಮವು ದಿನಾಂಕ 09-04-2023ರಂದು ಉಡುಪಿಯ ಕೇರಳ ಕಲ್ಚರಲ್ ಅಂಡ್ ಸೋಷಿಯಲ್ ಸೆಂಟರ್ ನಲ್ಲಿ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಹಿರಿಯ ಕಥೆಗಾರರು, ವಿಮರ್ಶಕರಾದ ಬೆಳಗೋಡು ರಮೇಶ್ ಭಟ್ ಅವರು ಮಾತನಾಡುತ್ತಾ ಭಾಷೆ ಇರುವುದು ಸಂಹನಕ್ಕೆ, ಯಾವ ಭಾಷೆಯು ಇನ್ನೊಂದು ಭಾಷೆಯನ್ನು ದ್ವೇಷಿಸು ಎನ್ನುವುದಿಲ್ಲ. ಭಾಷೆ ಮತ್ತು ಮನುಷ್ಯ ಬೆಳೆಯುವುದು ಕೊಳು-ಕೊಡುವುದರಿಂದ, ಕೂಪಮಂಡೂಕರಾಗಬೇಡಿ. ಭಾಷೆಯ ವಿಷಯದಲ್ಲಿ ರಾಜಕಾರಣಿಗಳ ಭಾಷೆಯ ಅಗತ್ಯವಿಲ್ಲ ಎನ್ನುವ ಕಿವಿ ಮಾತನ್ನು ಹೇಳಿದರು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ತಾಲೂಕು ಘಟಕ ಬಹಳ ಒಳ್ಳೆಯ ಕೆಲಸಗಳನ್ನು ಸಮಾಜಕ್ಕೆ ನೀಡುತ್ತಿದೆ ಎಂದರು. “ಕನ್ನಡ ಮಾತನಾಡು” ಕಾರ್ಯಕ್ರಮದಲ್ಲಿ ಸುಮಾರು ಎರಡು ತಿಂಗಳಿಂದ 30 ತರಗತಿಗಳು ನಡೆದಿದ್ದು 25ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು, ಪ್ರಮಾಣಪತ್ರವನ್ನು ವಿತರಿಸಲಾಯಿತು.

    ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು . ಇದೇ ಸಂದರ್ಭದಲ್ಲಿ ಕನ್ನಡ ಮಾತನಾಡು ಕಾರ್ಯಕ್ರಮದ ಮುಖ್ಯ ತರಬೇತುದಾರರಾದ ಡಾ. ಗಣನಾಥ್ ಎಕ್ಕಾರು ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಣಿಪಾಲ ಸೋನಿಯಾ ಕ್ಲಿನಿಕ್ ವೈದ್ಯರಾದ ಡಾ. ಗಿರಿಜಾ, ಕೇರಳ ಸೋಶಿಯಲ್ ಮತ್ತು ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿ ಬಿನೇಶ್ ವಿ.ಸಿ., ಉಡುಪಿ ಜಿಲ್ಲಾ ಕಸಾಪ ಕೋಶಾಧ್ಯಕ್ಷರಾದ ಮನೋಹರ್ ವಿ. ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕಿನ ಅಧ್ಯಕ್ಷ ರವಿರಾಜ್ ಎಚ್.ವಿ. ಪ್ರಸ್ತಾವಿಕ ಮಾತನಾಡಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleತುಳು ಹರಿಕಥೆ ಉಚ್ಚಯ 2023 – ದಿನ 2
    Next Article ‘ನೂರಾರು ಲೇಖಕರ ನೂರಾರು ಕತೆಗಳು’ ಕಥಾ ಸಂಕಲನ ಬಿಡುಗಡೆ
    roovari

    Add Comment Cancel Reply


    Related Posts

    ‘ನುಡಿ ತೋರಣ’ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೆಂಗಳೂರು ಇದರ ತ್ರೈವಾರ್ಷಿಕ ಸಾಹಿತ್ಯ ಸಮಾವೇಶ -2025 | ಜೂನ್ 29

    June 28, 2025

    ಬೆಸೆಂಟ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ 106ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

    June 28, 2025

    ಕುಮಾರಿ ಭಾಗ್ಯಶ್ರೀ ಶಿ. ಹುರಕಡ್ಲಿಯವರ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ ಸಮಾರಂಭ | ಜೂನ್ 29

    June 28, 2025

    ಪುಸ್ತಕ ವಿಮರ್ಶೆ | ಉದಯಕುಮಾರ್ ಹಬ್ಬುರವರ ಪೌರಾಣಿಕ ಕಾದಂಬರಿ ‘ಉತ್ತರೆ’

    June 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.