ಸುಳ್ಯ : ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು, ಕನ್ನಡ ಸಾಹಿತ್ಯ ಪರಿಷತ್ ಪಂಜ ಹೋಬಳಿ ಘಟಕ, ನೆಹರು ಮೆಮೋರಿಯಲ್ ಕಾಲೇಜು ಐ. ಕ್ಯೂ. ಎ. ಸಿ. ವಿಭಾಗ ಮತ್ತು ಕನ್ನಡ ಸಂಘ ಇದರ ಅಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸಾಹಿತ್ಯ ಸಂಭ್ರಮದ 3ನೇ ಕಾರ್ಯಕ್ರಮವು ದಿನಾಂಕ 05 ನವಂಬರ್ 2024ರಂದು ಸುಳ್ಯದ ಸಂಧ್ಯಾರಶ್ಮಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಜನಪದ ಸಂಶೋಧಕ ಹಾಗೂ ಸಾಹಿತಿ ಡಾ. ಸುಂದರ ಕೇನಾಜೆ ಮಾತನಾಡಿ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಬ್ದಾರಿ ನಮ್ಮೆಲ್ಲಾ ಕನ್ನಡಿಗರ ಮೇಲಿದೆ. ಕನ್ನಡ ಭಾಷೆ ರಾಜಾಶ್ರಯ ಇಲ್ಲದೇ ಸಮಸ್ಯೆಯನ್ನು ಎದುರಿಸುತ್ತಿದ್ದು ಈ ಬಗ್ಗೆ ಎಲ್ಲರೂ ಚಿಂತನೆ ನಡೆಸಬೇಕು.” ಎಂದು ಕರೆ ಇತ್ತರು.
ಚಂದ್ರಾವತಿ ಬಡ್ಡಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಆಗಮಿಸಿದ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಧ್ಯಾರಶ್ಮಿ ಸಾಹಿತ್ಯ ಸಂಘ ಇದರ ಗೌರವಾಧ್ಯಕ್ಷ ಡಾ. ರಂಗಯ್ಯ ಎಸ್., ಕ .ಸಾ. ಪ. ಇದರ ಕೊಶಾಧಿಕಾರಿ ದಯಾನಂದ ಆಳ್ವ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಳ್ಳತ್ತಡ್ಕ, ಸಿ. ಎ. ಗಣೇಶ್ ಭಟ್, ಕೇಶವ ಸಿ. ಎ., ಪ್ರೊ. ದಾಮೋದರ ಗೌಡ, ಡಾ. ಪೂವಪ್ಪ ಕಣಿಯೂರು, ಕುಮಾರಸ್ವಾಮಿ ತೆಕ್ಕುಂಜ, ಪ್ರಭಾಕರ ಕಿರಿಭಾಗ, ಹೇಮಾವತಿ ದೇಂಗೋಡಿ, ಗಿರಿಜಾ ಎಮ್. ವಿ., ತೇಜಸ್ವಿನಿ ಕಿರಣ್, ಚೇತನಾ ನೇಮಿರಾಜ್, ಸುಭಾಶ್, ಸಂಧ್ಯಾ ಮಂಡೇಕೊಲು ಮತ್ತು ವಿಜಯಕುಮಾರ್ ಉಪಸ್ಥಿತರಿದ್ದರು. ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷ್ಯೆ ಶ್ರೀಮತಿ ಲೀಲಾ ದಾಮೋದರ ಸ್ವಾಗತಿಸಿ, ಕೆ. ಆರ್. ಗೋಪಾಲ ಕೃಷ್ಣ ಕಾರ್ಯಕ್ರಮ ನಿರೂಪಿಸಿ, ಅಬ್ದುಲ್ಲಾ ಅರಂತೋಡು ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಕಲಾವಿದರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು.