Subscribe to Updates

    Get the latest creative news from FooBar about art, design and business.

    What's Hot

    ಕಯ್ಯಾರಿನಲ್ಲಿ ಡಾ. ಕಯ್ಯಾರ ಕಿಞಣ್ಣ ರೈಯವರ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ | ಜೂನ್ 18

    June 16, 2025

    ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಕೃತಿ ಲೋಕಾರ್ಪಣೆ

    June 16, 2025

    ಯಶಸ್ವಿಯಾಗಿ ಜರಗಿದ ಭಾವಗೀತೆಗಳ ಹರಿಕಾರ ಎಚ್.ಎಸ್.ವಿ. ನುಡಿನಮನ ಮತ್ತು ಮುಂಗಾರು ಕಾವ್ಯೋತ್ಸವ

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶ್ವಮಂಗಳದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ವಿಶೇಷೋಪನ್ಯಾಸ
    Literature

    ವಿಶ್ವಮಂಗಳದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ವಿಶೇಷೋಪನ್ಯಾಸ

    November 4, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮುಡಿಪು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕ ಮತ್ತು ವಿಶ್ವಮಂಗಳ ವಿದ್ಯಾ ಸಂಸ್ಥೆ ಮಂಗಳಗಂಗೋತ್ರಿ ಆಶ್ರಯದಲ್ಲಿ ವಿಶ್ವಮಂಗಳದಲ್ಲಿ ದಿನಾಂಕ 01-11-2023ರಂದು ಕನ್ನಡ ರಾಜ್ಯೋತ್ಸವ ಮತ್ತು ವಿಶೇಷೋಪನ್ಯಾಸ ಕಾರ್ಯಕ್ರಮ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಲತಾ ಅಭಯ್ “ಎಲ್ಲರನ್ನು ಸಮಭಾವದಿಂದ ನೋಡುವ ಗೌರವಿಸುವ ಮನೋಭಾವ ಕನ್ನಡಿಗರದ್ದು. ಪರಧರ್ಮ, ಪರ ವಿಚಾರಗಳನ್ನೂ ಗೌರವಿಸುತ್ತಾ ಬಂದ ಸಹಿಷ್ಣು ಪರಂಪರೆ ಕನ್ನಡ ನಾಡಿನದ್ದು. ಕನ್ನಡ ಭಾಷೆ ಸಾಹಿತ್ಯದ ಕುರಿತಾದ ತಿಳುವಳಿಕೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳು ಗ್ರಾಮಾಂತರ ಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಉಳ್ಳಾಲದ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ” ಎಂದು ಹೇಳಿದರು.

    ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಡಾ. ಪರಮೇಶ್ವರ ವಹಿಸಿದ್ದರು. ಸಮಾರಂಭದಲ್ಲಿ ಉಳ್ಳಾಲ ಕಸಾಪ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಉಳ್ಳಾಲ ಹೋಬಳಿ ಅಧ್ಯಕ್ಷೆ ವಿಜಯಲಕ್ಷ್ಮೀ ಪ್ರಸಾದ್ ರೈ, ವಿಶ್ವಮಂಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರವೀಣ್, ವಿಶ್ವಮಂಗಳ ವಿದ್ಯಾ ಸಂಸ್ಥೆಯ ಕಾಲೇಜು ಪ್ರಾಂಶುಪಾಲೆ ಪೂರ್ಣಿಮಾ ಡಿ. ಮತ್ತು ವಿಶ್ವಮಂಗಳ ವಿವಿಧ ಶಾಲೆಗಳ ಮುಖ್ಯಸ್ಥರುಗಳಾದ ಪ್ರಿಯಾ, ಶೋಭಾವತಿ, ಹಂಸಗೀತ ಮತ್ತು ವೆರೋನಿಕಾ ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ ಡಾ.ಲತಾ ಅಭಯ್ ಇವರಿಗೆ ರಾಜ್ಯೋತ್ಸವ ಸಮಾರಂಭದ ಗೌರವ ಸನ್ಮಾನವನ್ನು ಮಾಡಲಾಯಿತು. ವಿಶ್ವಮಂಗಳ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಿಯಾ ಸ್ವಾಗತಿಸಿ, ಸಹಶಿಕ್ಷಕಿ ಆಶಾಲತ ವಂದಿಸಿ, ವಿದ್ಯಾರ್ಥಿನಿ ತ್ವಿಶಾ ನಿರೂಪಿಸಿದರು. ಶ್ರಿಯಾ ರಾಜ್ಯೋತ್ಸವದ ಮಹತ್ವದ ಕುರಿತು ಮಾತನಾಡಿದರು. ಸಮಾರಂಭದ ಬಳಿಕ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಾಂಗಣದಿಂದ ಆನಂದ ಆಳ್ವ, ಪೆರುವಡಿ ಹಾಸ್ಯಗಾರರಿಗೆ ಶ್ರದ್ಧಾಂಜಲಿ
    Next Article ‘ಸಂಗಂ ಸಾಹಿತ್ಯ ಪುರಸ್ಕಾರ -2023’ಕ್ಕೆ ಕಥಾ ಸಂಕಲನಗಳ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 22 
    roovari

    Add Comment Cancel Reply


    Related Posts

    ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಕೃತಿ ಲೋಕಾರ್ಪಣೆ

    June 16, 2025

    ಯಶಸ್ವಿಯಾಗಿ ಜರಗಿದ ಭಾವಗೀತೆಗಳ ಹರಿಕಾರ ಎಚ್.ಎಸ್.ವಿ. ನುಡಿನಮನ ಮತ್ತು ಮುಂಗಾರು ಕಾವ್ಯೋತ್ಸವ

    June 16, 2025

    ಮನೆಮನೆ ಕನ್ನಡ ಜಾಗೃತಿ ಅಭಿಯಾನ ಉದ್ಘಾಟನೆ | ಜೂನ್ 22

    June 16, 2025

    ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ‘ಮರೆಯಲಾಗದ ಬ್ಯಾರಿ ಮಹನೀಯರು’ ಕೃತಿಗಳ ಲೋಕಾರ್ಪಣೆ | ಜೂನ್ 20

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.