ಸಾಲಿಗ್ರಾಮ : ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ ಹಾಗೂ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ದಿನಾಂಕ 01 ನವೆಂಬರ್ 2025ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಾಹಿತಿ ಶ್ರೀ ಕೆ.ಜಿ. ಸೂರ್ಯನಾರಾಯಣ ಮಯ್ಯ ಇವರು ಕನ್ನಡ ಧ್ವಜನಮನ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು “ಕನ್ನಡ ಮಾಧ್ಯಮದ ಶಾಲೆಯನ್ನು ಉಳಿಸಬೇಕೆಂದು ಕರೆ ನೀಡಿದರು. ನಾವು ಪ್ರತಿಯೊಬ್ಬರೂ ನಮ್ಮನ್ನು ನಾವು ಪ್ರೀತಿಸಬೇಕು. ಆಗ ಮಾತ್ರ ನಾವು ಬೇರೆಯವರನ್ನೂ ಪ್ರೀತಿಸುತ್ತೇವೆ. ನಮ್ಮ ನಾಡು ನಮ್ಮ ಹೆಮ್ಮೆಯ ಭಾಷೆ ಕನ್ನಡ ನಮ್ಮ ರಾಜ್ಯ ನಮ್ಮ ದೇಶ ಹೀಗೆ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಭಾಷಾ ಅಭಿಮಾನಬೇಕು, ದುರಭಿಮಾನ ಒಳ್ಳೆಯದಲ್ಲ. ಮಕ್ಕಳೂ ಸೇರಿದಂತೆ ಎಲ್ಲರೂ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಕಲಿಯೋಕೆ ನೂರು ಭಾಷೆ ಆಡೋಕೆ ಒಂದೇ ಭಾಷೆ ಕನ್ನಡಾ ಕನ್ನಡಾ ಕನ್ನಡಾ ಎಲ್ಲಿಯವರೆಗೆ ಉಪಭಾಷೆಗಳು ಜೀವಂತವಾಗಿರುತ್ತದೆ. ಅಲ್ಲಿಯವರೆಗೆ ಕನ್ನಡ ಭಾಷೆಗೆ ಅಳಿವಿಲ್ಲ. ಕನ್ನಡ ಭಾಷೆಗೆ ಉಪಭಾಷೆಗಳ ಕೊಡುಗೆ ಅಪಾರ” ಎನ್ನುವ ವಿಚಾರವನ್ನು ವ್ಯಕ್ತಪಡಿಸಿದರು.

ಬಳಗದ ಉಪಾಧ್ಯಕ್ಷ ಶ್ರೀ ಕೆ. ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಶಾಲಾ ನಿವೃತ್ತ ಅಧ್ಯಾಪಕರಾದ ಶ್ರೀ ನಾರಾಯಣ ಆಚಾರ್ಯ, ಶಾಲಾ ಸಂಚಾಲಕರಾದ ಎನ್. ಪ್ರಭಾಕರ ಕಾಮತ್ ಹಾಗೂ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಗುರುರಾಜ್ ಉಪಾಧ್ಯ ಉಪಸ್ಥಿತರಿದ್ದರು. ಬಳಗದ ಅಧ್ಯಕ್ಷ ಶ್ರೀ ಕೆ. ತಾರಾನಾಧ ಹೊಳ್ಳ ಸ್ವಾಗತಿಸಿ, ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ ವಂದಿಸಿದರು. ಗೆಳೆಯರ ಬಳಗದ ಕಾರ್ಯಕಾರಿ ಮಂಡಳಿಯ ಕೆ. ತಮ್ಮಯ್ಯ, ಜಗದೀಶ ಆಚಾರ್ಯ, ರಘು ಭಂಡಾರಿ, ಶ್ರೀಪತಿ ಆಚಾರ್ಯ, ಶ್ರೀಕಾಂತ ಐತಾಳ, ರಾಘವೇಂದ್ರ, ಶಾಲಾ ಅಧ್ಯಾಪಕ ವೃಂದ, ಸ್ಥಳೀಯರು, ಎಸ್.ಡಿ.ಎಂ.ಸಿ. ಸದಸ್ಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ನಂತರ ಮಕ್ಕಳಿಗೆ ಸಿಹಿತಿಂಡಿ ಹಂಚಲಾಯಿತು. ನಂತರ ಶಾಲಾ ಮಕ್ಕಳಿಗೆ ಲಿಖಿತ ರಸಪ್ರಶ್ನೆ ಏರ್ಪಡಿಸಲಾಯಿತು.
