ಬೆಂಗಳೂರು : ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್ ಬೆಂಗಳೂರು ಮತ್ತು ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಇವರ ಸಹಕಾರದೊಂದಿಗೆ ‘ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ’ವನ್ನು ದಿನಾಂಕ 02 ನವೆಂಬರ್ 2025 ಭಾನುವಾರ ಮಧ್ಯಾಹ್ನ 2-30 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಗಾಯನ, ಭರತನಾಟ್ಯ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ ಇವರು ವಹಿಸಲಿದ್ದು, ಖ್ಯಾತ ವಿಮರ್ಶಕರಾದ ಡಾ. ಬೈರಮಂಗಲ ರಾಮೇಗೌಡ ಇವರು ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ಶೈಲೇಶ್ ಕಾಕೋಳು ಇವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಆರ್. ಅಂಬುಜಾಕ್ಷಿ ಬಿರೇಶ್, ಜಕ್ಕೂರು ನಾಗರಾಜು, ರುದ್ರಪ್ಪ ಮತ್ತು ಜಯಕುಮಾರ್ ಇವರಿಂದ ಗಾಯನ ಹಾಗೂ ಶ್ರೀಮತಿ ರಮ್ಯಾ ಚಲುವಮೂರ್ತಿ ಇವರ ಶ್ರೀ ರಾಗ ಭೈರವ ನೃತ್ಯ ಕೇಂದ್ರದ ಹಾಗೂ ವಿದುಷಿ ಚೈತ್ರ ವೆಂಕಟೇಶ್ ಇವರ ಆನಂದ ನರ್ತನ ಕಲಾ ಶಾಲೆಯ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

