ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಉಡುಪಿ ತಾಲೂಕು 14ನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ಸುಹಾಸಂ’ ಸಾಹಿತ್ಯ ಸಂಗೀತ ಸುಧೆಯು ದಿನಾಂಕ 30-12-2023ರಂದು ಮಣಿಪಾಲದ ಶ್ರೀ ಕ್ಷೇತ್ರ ಶಿವಪ್ಪಾಡಿ ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಶ್ರೀ ರಮಾನಂದ ಸ್ಮೃತಿ ಮಂಟಪದಲ್ಲಿ ನಡೆಯಲಿದೆ.
ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಮಮತಾ ದೇವಿ ಜಿ.ಎಸ್. ಇವರು ಧ್ವಜಾರೋಹಣ ಮತ್ತು ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಇವರು ಪರಿಷತ್ ಧ್ವಜಾರೋಹಣ ನಡೆಸಿಕೊಡಲಿರುವರು. ಗಂಟೆ 9.30ಕ್ಕೆ ಹರ್ಷಿತಾ ಉಡುಪ ಮತ್ತು ಪ್ರಣಮ್ಯ ತಂತ್ರಿ ಇವರಿಂದ ‘ಯಕ್ಷ ನಾಟ್ಯ ವೈಭವ’. ಗಂಟೆ 9.50ಕ್ಕೆ ಹಿರಿಯ ಸಾಹಿತಿಗಳಾದ ನೆಂಪು ನರಸಿಂಹ ಭಟ್ ಇವರು ಸಾಹಿತಿ ದಿ. ತಾರಾ ಭಟ್ ನೆನಪಿನ ಪುಸ್ತಕ ಮಳಿಗೆಯ ಉದ್ಘಾಟನೆ ಮಾಡಲಿದ್ದಾರೆ.
ಪೂರ್ವಾಹ್ನ 10 ಗಂಟೆಗೆ ವಿದ್ಯಾರ್ಥಿಗಳಿಂದ ನಾಡೆಗೀತೆ ಮತ್ತು ರೈತ ಗೀತೆಯೊಂದಿಗೆ ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದೆ. ಸಾಹಿತಿಗಳಾದ ಎಚ್. ಶಾಂತರಾಜ ಐತಾಳ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಅಂತಾರಾಷ್ಟ್ರೀಯ ಕಲಾವಿದರು ಪರಿಸರವಾದಿಗಳಾದ ದಿನೇಶ್ ಹೊಳ್ಳ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶಶಿರಾಜ್ ಕಾವೂರು ರಚಿಸಿರುವ ಸಾಹಿತಿ ವೈದೇಹಿಯವರ ಕಥೆಗಳ ಆಧಾರಿತ ನಾಟಕ ಪುಸ್ತಕ ‘ಮರ ಗಿಡ ಬಳ್ಳಿ’, ಸಾಹಿತಿ ಅಂಶುಮಾಲಿಯವರ ಸೂರ್ಯ ಶಿಖರ ಕಾದಂಬರಿ ಮತ್ತು ಸಾಹಿತಿ ಜಯಪ್ರಕಾಶ್ ರಾವ್ ಅವರ ‘ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ’ ಎಂಬ ಕೃತಿಗಳ ಲೋಕಾರ್ಪಣೆ ನಡೆಯಲಿದೆ.
ಗಂಟೆ 12ಕ್ಕೆ ಜಯರಾಮ್ ಮಣಿಪಾಲ ಮತ್ತು ಉಮೇಶ್ ಮಣಿಪಾಲ ಇವರಿಂದ ‘ಗೀತ ಗಾಯನ’, 12.15ಕ್ಕೆ ಗೃಹಿಣಿಯರಿಂದ ಅಡುಗೆಮನೆ ಸಾಹಿತ್ಯ ‘ಅಂಚೆ ಕಾರ್ಡ್ ಕಥೆಗಳು’ – ಅನಿತಾ ಸಿಕ್ವೇರಾ, ಪುಳಿಮಾರು ಭವಾನಿ ಶೆಟ್ಟಿ, ನೀರಜಾ ಓಕುಡೆ, ಮಿಸ್ರಿಯ, ಯಶೋದಾ ಗಾಣಿಗ ಕುಂದಾಪುರ, ಲಲಿತಾ ಪ್ರದೀಪ್ ಮಣಿಪಾಲ ಇವರು ಸ್ವರಚಿತ ಕಥೆ ವಾಚಿಸುವ ಗೃಹಿಣಿಯರು.
ಮಧ್ಯಾಹ್ನ 1 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಣಿಪಾಲದ ವಿಪಂಚಿ ಬಳಗದವರಿಂದ ‘ನಾಲ್ಕು ತಂತಿಗಳಲ್ಲಿ ಕನ್ನಡದ ಭಾವಗೀತೆಗಳು’ – ವಿದುಷಿ ಪವನ ಬಿ. ಅಚಾರ್, ಶ್ರೀಮತಿ ಶಶಿಕಲಾ ಭಟ್, ಶ್ರೀಮತಿ ಶಿಲ್ಪಾ ಜೋಶಿ, ಡಾ. ಕೌಸ್ತುಭಾ ರಾವ್, ಕುಮಾರಿ ಪ್ರಿಯದರ್ಶಿನಿ ಇದರಲ್ಲಿ ಭಾಗವಹಿಸುವ ಕಲಾವಿದರು. ಸಹ ವಾದನದಲ್ಲಿ ಡಾ. ಬಾಲಕೃಷ್ಣ ಅಚಾರ್ ಮತ್ತು ಕುಮಾರಿ ಜಾಹ್ನವಿ ಶೆಣೈ ಸಹಕರಿಸಲಿರುವರು. ಗಂಟೆ 1.45ಕ್ಕೆ ವಿದುಷಿ ಡಾ. ಮಂಜರಿಚಂದ್ರ ಪುಷ್ಪರಾಜ್ ಇವರ ಶಿಷ್ಯೆ ವಿದುಷಿ ಅದಿತಿ ಮೆಹೆಂದಳೆ ಇವರಿಂದ ‘ನೃತ್ಯ ಸಿಂಚನ’ ನಡೆಯಲಿದೆ.
ಮಧ್ಯಾಹ್ನ ಗಂಟೆ 2ರಿಂದ ‘ಯುವ ಕವಿಗೋಷ್ಠಿ’ಯಲ್ಲಿ ಭಾಗವಹಿಸುವ ಯುವ ಕವಿಗಳು – ಪ್ರೇಮಸಾಯಿ, ವಂದನಾ ಆರ್. ಹೆಗಡೆ, ಸೌಜನ್ಯ ಆರ್., ಸುಷ್ಮಾ, ನಾಗರತ್ನ, ಪ್ರವೀಣ ಯಮನಪ್ಪ ಬೆನಕನವಾರಿ ಮತ್ತು ಕರಿವೀರಯ್ಯ. ಶಿಕ್ಷಕರಾದ ಸಂಜೀವ ನಾಯ್ಕ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ. ಗಂಟೆ 2.50ಕ್ಕೆ ಸಾಂಸ್ಕೃತಿಕ ಕಲರವದಲ್ಲಿ ಕಲಾವಿದೆ ಪದ್ಮಾಸಿನಿ ಉದ್ಯಾವರ ಇವರಿಂದ ಒಡಿಸ್ಸಿ ನೃತ್ಯ, ಗಂಟೆ 3ಕ್ಕೆ ‘ಅಲ್ಲಿ ಇಲ್ಲಿ ಹಾಸ್ಯ’ ಗೋಷ್ಠಿಯಲ್ಲಿ ಮೂಳೆ ರೋಗ ತಜ್ಞರಾದ ಡಾ. ಚೆನ್ನಕೇಶವ ರಾವ್ ಇವರಿಂದ ‘ಕ್ಲಿನಿಕ್ ನಲ್ಲಿ ಹಾಸ್ಯ’, ರಂಗನಟ ಯೋಗೀಶ್ ಕೊಳಲಗಿರಿಯವರಿಂದ ‘ನಾಟಕದಲ್ಲಿ ಹಾಸ್ಯ’ ಮತ್ತು ಯಕ್ಷಗಾನ ಕಲಾವಿದ ಶ್ರೀ ರಮಣ ಆಚಾರ್ಯ ಇವರಿಂದ ‘ಯಕ್ಷಗಾನದಲ್ಲಿ ಹಾಸ್ಯ’ದ ಬಗ್ಗೆ ಮಾತನಾಡಲಿದ್ದಾರೆ. ಗಂಟೆ 3.50ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ ಮತ್ತು ಗಂಟೆ 4.35ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಸಮ್ಮೇಳನದ ವಿಶೇಷತೆಗಳು :
# ಪರ್ಕಳ- ಮಣಿಪಾಲದ ಮಧ್ಯದಲ್ಲಿ ಇರುವ ಶಿವಪ್ಪಾಡಿಯ ಸುಂದರ ಪರಿಸರ
# ಎಂ.ಐ.ಟಿ. ಬಸ್ ನಿಲ್ದಾಣದಿಂದ ಶಿವಪ್ಪಾಡಿ ವರೆಗೆ ಅದ್ದೂರಿಯ ಮೆರವಣಿಗೆ
# 83 ವರ್ಷದ ಹಿರಿಯ ನಗುಮೊಗದ ಎಚ್. ಶಾಂತರಾಜ ಐತಾಳ್ ಅವರ ಸರ್ವಾಧ್ಯಕ್ಷತೆ
# ಖ್ಯಾತ ಪರಿಸರವಾದಿ, ಅಂತರಾಷ್ಟ್ರೀಯ ಕಲಾವಿದ ದಿನೇಶ್ ಹೊಳ್ಳ ಅವರ ಉದ್ಘಾಟನಾ ಮಾತು
# ಬೆಳಗ್ಗೆ ಎಂಟರಿಂದ ರಾತ್ರಿ 8ರವರೆಗೆ ನಿರಂತರ 12 ಗಂಟೆಗಳ ಸಾಹಿತ್ಯ, ಸಾಂಸ್ಕೃತಿಕ ಸಂಭ್ರಮ
# ಐವರು ಸಾಧಕರಿಗೆ ಉದ್ಘಾಟನಾ ಸಮಾರಂಭದಲ್ಲಿ ಗೌರವ ಅಭಿನಂದನೆ
# ಗೃಹಿಣಿಯರಿಗಾಗಿ ವಿಶೇಷ ಗೋಷ್ಠಿ ‘ಅಂಚೆ ಕಾರ್ಡ್ ಕಥೆಗಳು’
# ವಿವಿಧ, ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು
# ವಿದ್ಯಾರ್ಥಿಗಳ ಕವಿಗೋಷ್ಠಿ
# ನಕ್ಕು ನಗಿಸುವ ಹಾಸ್ಯಗೋಷ್ಠಿ
# ಪರ್ಕಳದ ಅನ್ನ ದಾನಿಗಳಾದ ಅಜ್ಜ ಅಜ್ಜಿ ಹೋಟೆಲ್ ಮಾಲಕರಿಗೆ ಗೌರವ ಸನ್ಮಾನ
# 20 ಸಾಧಕರಿಗೆ ಗೌರವ ಸನ್ಮಾನ
# ತಾಲೂಕಿನ 5 ಸಾಧಕ ಸಂಘ ಸಂಸ್ಥೆಗಳಿಗೆ ಗೌರವ ಸನ್ಮಾನ
# ಸ್ವಾಗತ ಸಮಿತಿಯ ಅಧ್ಯಕ್ಷ, ಚತುರ ಸಂಘಟಕ ಮಹೇಶ್ ಠಾಕೂರ್ ಅವರ ಸಾರಥ್ಯ
# ಕನ್ನಡ ನಾಡು-ನುಡಿ ಸಂಸ್ಕೃತಿಯ ಅನಾವರಣ
# ಉಡುಪಿ ಶೈಲಿಯ ವಿಶಿಷ್ಟ ಉಪಹಾರ, ಭೋಜನದ ವ್ಯವಸ್ಥೆ
# ಡಿಸೆಂಬರ್ 30 ಶನಿವಾರ ಶಿವಪ್ಪಾಡಿಗೆ ಬನ್ನಿ……
ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸೋಣ ಬೆಳೆಸೋಣ’ …