ಮಂಗಳೂರು : ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಇದರ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷಗುರು ಶ್ರೀ ಜಯಕರ್ ಪಂಡಿತ್ ಬಜಾಲ್ ಇವರ ನಿರ್ದೇಶನದಲ್ಲಿ ‘ಸುದರ್ಶನ ಗರ್ವಭಂಗ’ ಹಾಗೂ ಶ್ರೀದೇವಿ ಲಲಿತೋಪಖ್ಯಾನ’ ಎಂಬ ಕನ್ನಡ ಯಕ್ಷಗಾನ ಬಯಲಾಟವು ದಿನಾಂಕ 26 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಬೋಳಾರ ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿದೆ.
ಮಧ್ಯಾಹ್ನ 2-300 ಗಂಟೆಗೆ ದಯಾನಂದ ಕೋಡಿಕಲ್ ಇವರ ಶಿಷ್ಯ ವೃಂದದವರಿಂದ ‘ಯಕ್ಷಗಾನಾರ್ಚನೆ’, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್ ಇವರು ವಹಿಸಲಿದ್ದು, ಅನುವಂಶಿಕ ಮೊಕ್ತೇಸರರಾದ ಶ್ರೀ ಜಿ. ರಘುರಾಮ ಉಪಾಧ್ಯಾಯ ಮತ್ತು ಶ್ರೀ ಎಸ್. ಹರೀಶ್ ಐತಾಳ್ ಇವರು ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದರಾದ ಶ್ರೀ ಅಶ್ವಥ್ ಮಂಜನಾಡಿ ಇವರಿಗೆ ‘ದಿ. ಚಂದ್ರಶೇಖರ ಬಲ್ಯಾಯ ಸಂಸ್ಮರಣಾ ಪ್ರಶಸ್ತಿ’ ನೀಡಲಾಗುವುದು. ಯಕ್ಷಗಾನ ಕಲಾವಿದರಾದ ಭಾಸ್ಕರ್ ಕೋಳ್ಯೂರು ಮತ್ತು ಕಿನ್ನಿಗೋಳಿ ಮೋಹಿನಿ ಕಲಾ ಸಂಪದ ಇದರ ವ್ಯವಸ್ಥಾಪಕರಾದ ಗಂಗಾಧರ ಡಿ. ಶೆಟ್ಟಿಗಾರ್ ಗೌರವ ಸನ್ಮಾನ ಮಾಡಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ತರಬೇತಿ ಕೇಂದ್ರದವರಿಂದ ‘ಸುದರ್ಶನ ಗರ್ವಭಂಗ’ ಹಾಗೂ ಶ್ರೀದೇವಿ ಲಲಿತೋಪಖ್ಯಾನ’ ಎಂಬ ಕನ್ನಡ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.