ಮಂಗಳೂರು : ಸೌಹಾರ್ದ ಸಾಹಿತ್ಯ ವೇದಿಕೆ ಹುಬ್ಬಳ್ಳಿ ಇದರ ಮಂಗಳೂರು ಘಟಕದ ವತಿಯಿಂದ ಮಂಗಳೂರಿನ ಕವಿ ಮನದವರಿಗೆ ಈ ತಿಂಗಳು ಸಾಹಿತ್ಯ ವಿಮರ್ಶೆಗಾಗಿ ಕನ್ನಡದ ಪ್ರೇಮ ಕವಿ ಖ್ಯಾತ ಕೆ.ಎಸ್. ನರಸಿಂಹಸ್ವಾಮಿಯವರ ಕವನಗಳನ್ನು ಆಯ್ಕೆ ಮಾಡಿ ವಾಚನ ಮತ್ತು ಭಾವಾರ್ಥ ವ್ಯಕ್ತಪಡಿಸುವ ಮೂಲಕ ವಿಚಾರ ಸಂಕಿರಣವನ್ನು ದಿನಾಂಕ 08 ಫೆಬ್ರುವರಿ 2026 ರವಿವಾರ ಸಂಜೆ 3-00 ಗಂಟೆಗೆ ಮಂಗಳೂರು ಲಾಲ್ ಭಾಗ್ ಪಬ್ಬಾಸ್ ಎದುರು ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ಆಯೋಜಿಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಶ್ರೀಮತಿ ಅನಿತಾ ಶೆಣೈ 72595 86907 ಹೆಸರು ನೊಂದಾಯಿಸಿ ಹಾಗೂ ಗ್ರೂಪ್ ನಲ್ಲಿ ವಾಚಿಸುವ ಕವನಗಳನ್ನು ಕಳುಹಿಸಿಬೇಕಾಗಿ ಈ ಮೂಲಕ ವಿನಂತಿ.
