ಮಂಗಳೂರು : ಸೌಹಾರ್ದ ಸಾಹಿತ್ಯ ವೇದಿಕೆ ಹುಬ್ಬಳ್ಳಿ ಇದರ ಮಂಗಳೂರು ಘಟಕದ ವತಿಯಿಂದ ಮಂಗಳೂರಿನ ಕವಿ ಮನದವರಿಗೆ ಈ ತಿಂಗಳು ಮಹಿಳಾ ಸಾಹಿತ್ಯ ವಿಮರ್ಶೆಗಾಗಿ ಕನ್ನಡದ ಶಿವಶರಣೆ ಅಕ್ಕಮಹಾದೇವಿರವರ ಎರಡು ವಚನಗಳನ್ನು ಆಯ್ಕೆ ಮಾಡಿ ವಾಚನ ಮತ್ತು ಭಾವಾರ್ಥ ವ್ಯಕ್ತಪಡಿಸುವ ಮೂಲಕ ವಿಚಾರ ಸಂಕಿರಣವನ್ನು ‘ಕನ್ನಡದ ಕಂಪು ಸರಣಿ -5’ ದಿನಾಂಕ 21 ಡಿಸೆಂಬರ್ 2025 ರವಿವಾರ ಸಂಜೆ 3-00 ಗಂಟೆಗೆ ಮಂಗಳೂರು ಲಾಲ್ ಭಾಗ್ ಪಬ್ಬಾಸ್ ಎದುರು ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು 7259586907 ಈ ನಂಬರಿಗೆ ಹೆಸರು ನೊಂದಾಯಿಸಿಕೊಳ್ಳಬಹುದು.
