ಕನ್ನಡನಾಡು ಕಂಡ ಅದ್ಭುತ ರಂಗಸಂಘಟಕ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜಿ.ಕಪ್ಪಣ್ಣ ಅವರಿಗೆ ಇದೀಗ 75ರ ಹರೆಯ.
ಜಾನಪದ, ಹವ್ಯಾಸೀ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಕನ್ನಡದ ಕಾರ್ಯಕ್ರಮಗಳನ್ನು ಸಂಘಟಿಸಿ ಜಗತ್ತಿನಾದ್ಯಂತ ತಲುಪಿಸಿದ ಶ್ರೀನಿವಾಸ್ ಜಿ. ಅವರು ‘ಕಪ್ಪಣ್ಣ’ ಎಂದೇ ಪ್ರಖ್ಯಾತರು. ಕರ್ನಾಟಕದಲ್ಲಿ ಜಾನಪದ ಉತ್ಸವಗಳನ್ನು ಆಯೋಜಿಸಿ ಪ್ರಖ್ಯಾತರಾದವರು. ಕರಾವಳಿ ಜಿಲ್ಲೆಗಳಿಗೂ ಅವರ ಸೇವೆ ಸಂದ ಹಿನ್ನೆಲೆಯಲ್ಲಿ ರಂಗಸಂಗಾತಿ, ಮಂಗಳೂರು ತಂಡವು ಇದೇ ಫೆ. 5, 2023 ರಂದು ಭಾನುವಾರ ಸಂಜೆ 5ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ. ಆರ್. ಐ. ಸಭಾಂಗಣದಲ್ಲಿ ದಕ್ಷಿಣ ಕನ್ನಡದ ಜಾನಪದ ಅವಲೋಕನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹಿರಿಯ ವಿದ್ವಾಂಸರೂ ನಿವೃತ್ತ ಕುಲಪತಿಗಳೂ ಆಗಿರುವ ಪ್ರೊ. ಬಿ. ಎ. ವಿವೇಕ ರೈ, ಮಂಗಳೂರು ವಿಶ್ವ ವಿದ್ಯಾಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಸೋಮಣ್ಣ, ಏರ್ಯ ಆಳ್ವ ಫೌಂಡೇಶನ್ನಿನ ಅಧ್ಯಕ್ಷರಾದ ಏರ್ಯ ಬಾಲಕೃಷ್ಣ ಹೆಗ್ಡೆ ಹಾಗೂ ಶ್ರೀನಿವಾಸ ಜಿ ಕಪ್ಪಣ್ಣ -ಮುಖ್ಯ ಅತಿಥಿಗಳಾಗಿರುವರು.
ಕಾರ್ಯಕ್ರಮಕ್ಕೆ ಹೊಂದಿಕೊಂಡಂತೆ ಮಂಗಳೂರಿನ ನೃತ್ಯಗುರು ಪ್ರತಿಮಾ ಶ್ರೀಧರ ಹೊಳ್ಳ ಅವರ ‘ಭರತಾಂಜಲಿ’ ಕಲಾತಂಡವು ದಿ. ಏರ್ಯ ಲಕ್ಷ್ಮೀನಾರಾಯಣ ಆಳ್ವರ ಕವನಗಳನ್ನು ಹಾಗೂ ಜನಪದ ಕವನಗಳನ್ನು ನೃತ್ಯಕ್ಕೆ ಅಳವಡಿಸಿ ನೃತ್ಯ ವೈಭವ ಪ್ರದರ್ಶಿಸಲಿದ್ದಾರೆ.
Subscribe to Updates
Get the latest creative news from FooBar about art, design and business.