ಹಾಸನ : ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಹಾಗೂ ಪ್ರತಿಮಾ ಟ್ರಸ್ಟ್ ಸಹಯೋಗದಲ್ಲಿ ದಿನಾಂಕ 22 ನವೆಂಬರ್ 2025ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ‘ಕಪ್ಪು ಹಲ್ಲಿನ ಕಥೆ’ ಕಾದಂಬರಿಯ ಎರಡನೇ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಾದಂಬರಿ ಕುರಿತು ಸುದೀರ್ಘ ಚರ್ಚೆ, ವಿಮರ್ಶೆ, ಅನಿಸಿಕೆಗಳು, ಅಭಿಪ್ರಾಯಗಳ ಮೂಲಕ ಹೊಸ ಮೆರಗು ತಂದುಕೊಟ್ಟಿತು.
ವೇದಿಕೆಯಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಚ್.ಎಲ್. ಮಲ್ಲೇಶಗೌಡ, ಹಿರಿಯ ಪತ್ರಕರ್ತರಾದ ಆರ್.ಪಿ. ವೆಂಕಟೇಶ ಮೂರ್ತಿ, ಸಾಹಿತಿಗಳಾದ ಶ್ರೀಮತಿ ದಯಾ ಗಂಗನಘಟ್ಟ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್.ಎನ್. ಲೋಕೇಶ್, ಕಾರ್ಯದರ್ಶಿಗಳಾದ ಬೊಮ್ಮೇಗೌಡ ಇವರುಗಳು ಉಪಸ್ಥಿತರಿದ್ದರು.


