ಸುರತ್ಕಲ್ : ಗೋವಿಂದ ದಾಸ ಕಾಲೇಜು ಗ್ರಂಥಾಲಯ, ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶಗಳ ಸಹಭಾಗಿತ್ವದಲ್ಲಿ, ಗೋವಿಂದದಾಸ ಕಾಲೇಜಿನ ಗ್ರಂಥಾಲಯದಲ್ಲಿ ಶಿವರಾಮ ಕಾರಂತರ 121ನೇ ಜನ್ಮ ದಿನಾಚರಣೆಯು ದಿನಾಂಕ 10-10-2023ರಂದು ನಡೆಯಿತು.
ಇದರ ಪ್ರಯುಕ್ತ ಆಯೋಜಿಸಿದ್ದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿಯವರು “ಶಿವರಾಮ ಕಾರಂತರು ಮಾನವತಾವಾದಿ ಹಾಗು ಪರಿಸರವಾದಿಯಾಗಿ, ನಾಡು-ನುಡಿಗಳ ಚಿಂತಕರಾಗಿದ್ದವರು.” ಎಂದು ನುಡಿದರು.
ಕಾಲೇಜಿನ ಉಪಪ್ರಾಂಶುಪಾಲ ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ಪ್ರೋ. ರಮೇಶ ಭಟ್, ಎಸ್.ಜಿ, ಎಂ.ಎಸ್ಸಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್, ಉಪನ್ಯಾಸಕರಾದ ಪ್ರೋ. ಕುಮಾರ ಮಾದರ, ಡಾ.ಆಶಾ, ಡಾ. ಪ್ರಶಾಂತ, ಗ್ರಂಥಾಲಯದ ಸಿಬ್ಬಂದಿಗಳಾದ ಸಾವಿತ್ರಿ ಮತ್ತು ಸುಮನ್ ಉಪಸ್ಥಿತರಿದ್ದರು. ಗ್ರಂಥಪಾಲಕಿ ಡಾ. ಸುಜಾತ ಬಿ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅಕ್ಷತಾ ಶೆಟ್ಟಿ ವಂದಿಸಿದರು.
Subscribe to Updates
Get the latest creative news from FooBar about art, design and business.