ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ “ಕರ್ಣ ಭೇದನ” ದಿನಾಂಕ 3 ಮೇ 2025 ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಯಲ್. ಯನ್. ಭಟ್ , ಸತೀಶ್ ಇರ್ದೆ , ಆನಂದ ಸವಣೂರು , ಪದ್ಯಾಣ ಶಂಕರನಾರಾಯಣ ಭಟ್ , ಮಾ. ಆದಿತ್ಯ ಕೃಷ್ಣ, ದ್ವಾರಕಾ, ಮಾ.ಅವಿನಾಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ ( ಕರ್ಣ ) ಶುಭಾ ಜೆ ಸಿ ಅಡಿಗ (ಶ್ರೀ ಕೃಷ್ಣ ) ಮಾಂಬಾಡಿ ವೇಣುಗೋಪಾಲ ಭಟ್ ( ಕುಂತಿ ) ಅಚ್ಯುತ ಪಾಂಗಣ್ಣಾಯ ( ಸೂರ್ಯ ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್ ವಂದಿಸಿದರು. ಆನಂದ ಸವಣೂರು ಪ್ರಾಯೋಜಿಸಿದ್ದರು.