ಉಪ್ಪಿನಂಗಡಿ: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್, (ರಿ.) ಉಪ್ಪಿನಂಗಡಿ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ನಡೆಸಲ್ಪಡುತ್ತಿರುವ ‘ಸ್ವರ್ಣ ಶತಕ’ ಶ್ರೀ ಮಹಾಭಾರತ ಸರಣಿ ಅಂಗವಾಗಿ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 06 ಸೆಪ್ಟೆಂಬರ್ 2025ರಂದು ಉಪ್ಪಿನಂಗಡಿಯ ರಾಮ ನಗರದಲ್ಲಿರುವ ಶ್ರೀ ಶಾರದಾ ಕಲಾ ಮಂಟಪದಲ್ಲಿ ನಡೆಯಿತು.
“ಕರ್ಣ ಭೇದನ” ಎಂಬ ಆಖ್ಯಾನದೊಂದಿಗೆ ನಡೆದ ಈ ತಾಳಮದ್ದಳೆ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಯಲ್. ಯನ್. ಭಟ್, ಚೆಂಡೆ ಮದ್ದಳೆಗಳಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಗುಡ್ಡಪ್ಪ ಬಲ್ಯ (ಕರ್ಣ), ದುಗ್ಗಪ್ಪ ನಡುಗಲ್ಲು (ಸೂರ್ಯ), ಕಿಶೋರಿ ದುಗ್ಗಪ್ಪ ನಡುಗಲ್ಲು (ಕುಂತಿ) ಸಹಕರಿಸಿದರು.
Subscribe to Updates
Get the latest creative news from FooBar about art, design and business.
Previous Articleಲೋಕಾರ್ಪಣೆಗೊಂಡ ‘ಕೀಮೋ’ ಕೃತಿ