ಉಡುಪಿ: ಬೆಂಗಳೂರಿನ ಗಾಯನ ಸಮಾಜವು ಆಯೋಜಿಸಿದ 54 ನೇ ಸಂಗೀತ ಸಮ್ಮೇಳನವು ದಿನಾಂಕ 03 ನವೆಂಬರ್2024ರಿಂದ 10 ನವೆಂಬರ್ 2024ರ ವರೆಗೆ ಬೆಂಗಳೂರಿನ ಕೆ. ಆರ್. ರಸ್ತೆಯಲ್ಲಿರುವ ‘ಬೆಂಗಳೊರು ಗಾಯನ ಸಮಾಜ’ದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸೇವೆ ಮತ್ತು ಸಾಧನೆಗಾಗಿ ಉಡುಪಿಯ ಸಂಗೀತ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಇವರಿಗೆ “ಕರ್ನಾಟಕ ಕಲಾಚಾರ್ಯ” ಪ್ರಶಸ್ತಿ ಮತ್ತು ಐವತ್ತು ಸಾವಿರ ನಗದು ನೀಡಿ ಸನ್ಮಾನಿಸಲಾಯಿತು.
ಮೇಲುಕೋಟೆ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀಯದುಗಿರಿ ಯತಿರಾಜ ನಾರಾಯಣಜೀಯರ್ ಇವರು ಪ್ರಶಸ್ತಿ ಪ್ರದಾನ ಮಾಡಿದರು. ಗಾಯನ ಸಮಾಜದ ಅಧ್ಯಕ್ಷರಾದ ಎಮ್. ಆರ್. ವಿ ಪ್ರಸಾದ್ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಮಧೂರು ಬಾಲಸುಬ್ರಹ್ಮಣ್ಯಂ ಇವರ ಸಂಗೀತ ಕಛೇರಿಯನ್ನು ಏರ್ಪಡಿಸಲಾಗಿತ್ತು.