ಬೆಂಗಳೂರು : ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2023 ಸಾಲಿನ ರಾಜ್ಯಮಟ್ಟದ ನಾನಾ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ‘ಸಾಹಿತ್ಯ ರತ್ನ’ ಪ್ರಶಸ್ತಿಗೆ ಲೇಖಕ ಡಾ. ಎನ್. ಜಗದೀಶ್ ಕೊಪ್ಪ ಅವರ ‘ಬಹುತ್ವದ ಭಾರತ’ ಕೃತಿಯು ಆಯ್ಕೆಯಾಗಿದ್ದು, ‘ಯುವ ಸಾಹಿತ್ಯ ರತ್ನ’ ಪ್ರಶಸ್ತಿಗೆ ನಟಿ ರಂಜಿನಿ ರಾಘವನ್ ಅವರ ‘ಟೈಪ್ ರೈಟ್’ ಕೃತಿ ಆಯ್ಕೆಯಾಗಿದೆ. ಅದೇ ರೀತಿ ‘ಪುಸ್ತಕ ರತ್ನ’ ಪ್ರಶಸ್ತಿಗೆ ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್ ಅವರನ್ನು ಆಯ್ಕೆ ಮಾಡಲಾಗಿದ್ದು, ‘ಮುದ್ರಣ ರತ್ನ’ ಪ್ರಶಸ್ತಿಗೆ ಗೌರಿ ಲ್ಯಾಮಿನೇಟರ್ಸ್ ಸಂಸ್ಥೆಯ ಟಂಕಸಾಲಿ ಎಸ್. ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ನಾಲ್ಕೂ ಪ್ರಶಸ್ತಿಗಳು ತಲಾ 10,000 ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿವೆ. ಪ್ರಶಸ್ತಿಗಳನ್ನು ದಿನಾಂಕ 06-07-2024ರಂದು ಬೆಂಗಳೂರಿನ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸಾಮಯ್ಯ ತಿಳಿಸಿದ್ದಾರೆ.
ಡಾ. ಹೆಚ್. ಎನ್. ಜಗದೀಶ್ ಕೊಪ್ಪ
ಕುಮಾರಿ ರಂಜಿನಿ ರಾಘವನ್
ಶ್ರೀ ಅಭಿರುಚಿ ಗಣೇಶ್
ಶ್ರೀ ಕಂಟಸಾಲಿ ಎಸ್. ನಾಗರಾಜ್