ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡಮಿಯಿಂದ ಕೊಡಮಾಡುವ 51ನೇ ವಾರ್ಷಿಕ ಕಲಾ ಬಹುಮಾನಕ್ಕೆ ಮಂಗಳೂರಿನ ಖ್ಯಾತ ಕಲಾವಿದ ರಾಜೇಂದ್ರ ಕೇದಿಗೆ ಆಯ್ಕೆಯಾಗಿದ್ದಾರೆ.
ಶ್ರೀಯುತರು ಚಿತ್ರ ಕಲಾವಿದ ಮಾತ್ರವಲ್ಲದೆ ಕನ್ನಡ ಮತ್ತು ತುಳು ಕವಿ ಕೂಡ ಹೌದು. ಇವರು ಚಿತ್ರಕಲೆಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಬರಲ್ ಹೆರಿಟೇಜ್ ಮಂಗಳೂರು ಚಾಪ್ಟರ್’ ಮತ್ತು ‘ಆರ್ಟ್ ಕೆನರಾ ಟ್ರಸ್ಟ್’ನ ಅಜೀವ ಸದಸ್ಯರಾಗಿದ್ದಾರೆ. ಕೊಡಿಯಾಲಗುತ್ತಿನ ಸೆಂಟರ್ ಫಾರ್ ಆರ್ಟ್ಸ್ ಆ್ಯಂಡ್ ಕಲ್ಟರ್ ನಲ್ಲಿ ಗ್ಯಾಲರಿ ಎಸ್ – ಕ್ಯೂಬ್ ನ್ನು ನಡೆಸುತ್ತಿದ್ದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಕದ್ರಿಯಲ್ಲಿ ದಶಮಾನೋತ್ಸವ ಪ್ರಯುಕ್ತ ಯಕ್ಷಗಾನ ಪ್ರದರ್ಶನ | ಫೆಬ್ರವರಿ 22