ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದಿಂದ ನೀಡುವ ವಿವಿಧ ದತ್ತಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದ್ದು, ಸಂಘದಲ್ಲಿ ಇತ್ತೀಚೆಗೆ ನಡೆದ ಆಯ್ಕೆ ಸಮಿತಿಯಲ್ಲಿ ಸಾಹಿತಿಗಳಾದ ಎಂ.ಎಸ್. ಆಶಾದೇವಿ, ಡಾ.ಭೈರಮಂಗಲ ರಾಮೇಗೌಡ ಹಾಗೂ ಚಂದ್ರಿಕಾ ಪುರಾಣಿಕ ಇವರುಗಳು ಕೃತಿಗಳಿಗೆ ಪ್ರಶಸ್ತಿಗಳನ್ನು ಘೋಷಿಸಿದರು.
ಪ್ರಶಸ್ತಿ ಪುರಸ್ಕೃತರ ಪಟ್ಟಿಯು ಈ ಕೆಳಗಿನಂತಿದೆ.
‘ಕಾಕೋಳು ಸರೋಜಮ್ಮ (ಕಾದಂಬರಿ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಲೀಲಾ ಮಣ್ಣಾಲ ಅವರ ‘ರಾಜ್ಯ ರಾಜಶ್ರೀ ಹರ್ಷವರ್ಧನ’ ಕಾದಂಬರಿ ಹಾಗೂ 2022ನೇ ಸಾಲಿಗೆ ಎಚ್.ಆರ್. ಸುಜಾತ ಅವರ ‘ಮಣಿಬಾಲೆ’ ಕಾದಂಬರಿಗಳು ಆಯ್ಕೆಯಾಗಿವೆ.
‘ಭಾಗ್ಯ ನಂಜಪ್ಪ (ವಿಜ್ಞಾನ ಸಾಹಿತ್ಯ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಡಾ. ಎನ್. ಸುಧಾ ಅವರ ‘ಮಾನವನ ಅನುವಂಶೀಯ ಕಾಯಿಲೆಗಳು’ ಹಾಗೂ 2022ನೇ ಸಾಲಿಗೆ ಸುಕನ್ಯಾ ಸೂನಗಳ್ಳಿಯವರ ‘ಬೆಳೆರೋಗಗಳು ಕೀಟಗಳು ಮತ್ತು ಅವುಗಳ ನಿರ್ವಹಣೆ’ ಕೃತಿಗಳು ಆಯ್ಕೆಯಾಗಿವೆ.
‘ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಸಹನಾ ಕಾಂತಬೈಲು ಅವರ ‘ಇದು ಬರಿ ಮಣ್ಣಲ್ಲ’ ಮತ್ತು 2022ನೇ ಸಾಲಿಗೆ ನಳಿನಿ ಟಿ.ಭೀಮಪ್ಪರ ‘ಸೆಲ್ಫೀ …..(ನಮ್ನಮ್ದೇ ಪ್ರಪಂಚ)’ ಆಯ್ಕೆಯಾಗಿದೆ.
‘ಜಿ.ವಿ. ನಿರ್ಮಲ (ಅನುವಾದಿತ ಕಾದಂಬರಿ/ಕಥಾ ಸಂಕಲನ/ಜೀವನ ಚರಿತ್ರೆ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಗೀತಾ ಶೆಣೈ ಅವರ ‘ಕನಸಿನ ಹೂಗಳು’ ಮತ್ತು 2022ನೇ ಸಾಲಿಗೆ ಸುಮಂಗಲಾ ಮಮ್ಮಿಗಟ್ಟಿ ಅವರ ‘ಕಥಾ ನವಮಿ’ ಆಯ್ಕೆಯಾಗಿದೆ.
‘ತ್ರಿವೇಣಿ ಸಾಹಿತ್ಯ ಪುರಸ್ಕಾರ (ಪ್ರಾಯೋಜಕರು – ಸುಧಾಮೂರ್ತಿ ಸಣ್ಣಕಥೆ/ಕಾದಂಬರಿ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ರೇಣುಕಾ ಕೋಡಗುಂಟಿಯವರ ‘ನಿಲುಗನ್ನಡಿ’ ಹಾಗೂ 2022ನೇ ಸಾಲಿಗೆ ಶೋಭಾ ಗುನ್ನಾಪುರ ಅವರ ‘ಭೂಮಿಯ ಋಣ’ ಆಯ್ಕೆಯಾಗಿದೆ.
‘ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಎಸ್.ಪಿ. ವಿಜಯಲಕ್ಷ್ಮಿಯವರ ‘ನಕ್ಷತ್ರಗಳ ನೆಲದಲ್ಲಿ’ ಹಾಗೂ 2022ನೇ ಸಾಲಿಗೆ ಜಯಶ್ರೀ ದೇಶಪಾಂಡೆ ಅವರ ‘ಹಲವು ನಾಡು ಹೆಜ್ಜೆ ಹಾಡು’ ಆಯ್ಕೆಯಾಗಿದೆ.
‘ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ರೇಷ್ಮಾ ಭಟ್ ಅವರ ‘ಲಘುಬಗೆ’ ಹಾಗೂ 2022ನೇ ಸಾಲಿಗೆ ಚಂದ್ರಾವತಿ ಬಡ್ಡಡ್ಕ ಅವರ ‘ಲಘುಬಿಗು’ ಆಯ್ಕೆಯಾಗಿದೆ.
‘ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಶಾಲಿನಿ ಮೂರ್ತಿ ಅವರ ‘ಕಥೆಗಳ ತೋರಣ’ ಹಾಗೂ 2022ನೇ ಸಾಲಿಗೆ ವಾಣಿ ಪೆರಿಯೋಡಿಯವರ ‘ಮಕ್ಕಳಿಗಾಗಿ ಸಂವಿಧಾನ’ ಕೃತಿಗಳು ಆಯ್ಕೆಯಾಗಿವೆ.
‘ಇಂದಿರಾ ವಾಣಿರಾವ್ (ನಾಟಕ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಜಯಶ್ರೀ ಸಿ. ಕಂಬಾರ ಅವರ ‘ಹೊಸದಾರಿ’ ನಾಟಕ ಹಾಗೂ 2022ನೇ ಸಾಲಿಗೆ ಬಿ.ಎಂ. ಭಾರತಿ ಹಾದಿಗೆ ಅವರ ‘ನಿಂಗಪ್ಪ ನಾಗತಿ ಮತ್ತು ಇತರ ನಾಟಕಗಳು’ ಆಯ್ಕೆಯಾಗಿದೆ.
‘ಜಯಮ್ಮ ಕರಿಯಣ್ಣ (ಸಂಶೋಧನೆ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಡಾ.ವಿಜಯಾದೇವಿಯವರ ‘ಅಲ್ಲಮ ಪ್ರಭುದೇವರು’ ಹಾಗೂ 2022ನೇ ಸಾಲಿಗೆ ಡಾ. ಉಷಾದೇವಿ ಉದಯ ಹಿರೇಮಠ ಅವರ ‘ವಚನೋದ್ಯಾನ’ ಆಯ್ಕೆಯಾಗಿದೆ.
‘ತ್ರಿವೇಣಿ ದತ್ತಿನಿಧಿ (ಕಥೆ/ಕಾದಂಬರಿ- ಪ್ರಥಮ, ದ್ವಿತೀಯ, ತೃತೀಯ) ಪ್ರಶಸ್ತಿ’ಗೆ 2020ನೇ ಸಾಲಿನಲ್ಲಿ ಶ್ರೀದೇವಿ ಕೆರೆಮನೆಯವರ ‘ಚಿತ್ತಚಿತ್ತಾರ’ (ಕಥಾ ಸಂಕಲನ), ಜಯಂತಿ ಚಂದ್ರಶೇಖರ ಅವರ ‘ವಸುಂಧರ’ (ಕಾದಂಬರಿ), ಮಮತಾ ವಾರನಹಳ್ಳಿಯವರ ‘ಕಾಡು ಮಲ್ಲಿಗೆ’ (ಕಾದಂಬರಿ), 2021ನೇ ಸಾಲಿನಲ್ಲಿ ಆಶಾ ರಘು ಅವರ ‘ಮಾಯೆ’ (ಕಾದಂಬರಿ), ಅಕ್ಷತಾ ಕೃಷ್ಣಮೂರ್ತಿಯವರ ‘ಅಬ್ಬೋಲಿ’ (ಕಥಾ ಸಂಕಲನ), ನೂರ್ ಜಹಾನ್ ಹೊಸಪೇಟೆಯವರ ‘ಅನಾಥೆ’ (ಕಥಾಸಂಕಲನ), 2022ನೇ ಸಾಲಿನ ಮಾಲತಿ ಹೆಗಡೆಯವರ ‘ಅವನಿ’ (ಕಥಾ ಸಂಕಲನ), ಅರ್ಪಣ ಎಚ್.ಎಸ್. ಅವರ ‘ಕೆಂಪು ಹಾಗೂ ಇತರ ಬಹುಮಾನಿತ ಕಥೆಗಳು’ ಮತ್ತು ಗಾಯತ್ರಿ ರಾಜ್ ಅವರ ‘ಟ್ರಾಯ್’ (ಕಾದಂಬರಿ) ಹೀಗೆ ಅನುಕ್ರಮವಾಗಿ ಮೂರೂ ವರ್ಷದ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಉಷಾ ಪಿ. ರೈ (2022ನೇ ವರ್ಷಗಳಲ್ಲಿ ಪ್ರಕಟವಾದ ಆತ್ಮಕಥೆ/ಸ್ಮೃತಿ ಚಿತ್ರ ಲೇಖನಗಳು) ಪ್ರಶಸ್ತಿ’ಗೆ ಎಲ್.ಸಿ.ಸುಮಿತ್ರ ಅವರ ‘ಅಂಗೈ ಅಗಲದ ಆಕಾಶ’ ಆಯ್ಕೆಯಾಗಿದೆ.
‘ನಿರುಪಮಾ (ಕತೆಗಳು) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾದ ಟಿ.ಎಸ್. ಶ್ರವಣಕುಮಾರಿಯವರ ‘ಚದುರಂಗದ ಕುದುರೆ’ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಮುದ್ರಿತವಾದ ಡಾ. ಮೈತ್ರೇಯಿಣಿ ಗದಿಗೆಪ್ಪ ಗೌಡ ಅವರ ‘ನಮ್ಮನಾವರಿಸಿದ ಜ್ಞಾನದ ಭ್ರೂಣ ಬುದ್ಧ’ ಕತೆಗಳು ಆಯ್ಕೆಯಾಗಿವೆ.
2022ನೇ ಸಾಲಿನಲ್ಲಿ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾದ ಕಾವ್ಯ ಎಸ್. ಮನಮನೆಯವರ ‘ಆನುದೇವಾ ಹೊರಗಣವಳು’ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಮುದ್ರಿತವಾದ ಅಕ್ಷತಾ ರಾಜ್ ಪೆರ್ಲ ಅವರ ‘ಸುಳಿ ಕಂಡ ಸುಕ್ಕು’ ಕತೆಗಳು ಆಯ್ಕೆಯಾಗಿವೆ.
ಸಮಗ್ರ ಸಾಧನೆಗಾಗಿ ಕೊಡುವ ಪ್ರಶಸ್ತಿಗಳು ಈ ಕೆಳಗಿನಂತಿವೆ.
‘ಕೆ.ಟಿ. ಬನಶಂಕರಮ್ಮ ಪ್ರಶಸ್ತಿ’ಗೆ ಅನುಕ್ರಮವಾಗಿ 2020ನೇ ಸಾಲಿನಲ್ಲಿ ಕೊಪ್ಪಳದ ಡಾ. ಮಮ್ತಾಜ್ ಬೇಗಂ, 2021ನೇ ಸಾಲಿಗೆ ತುಮಕೂರಿನ ರಂಗಮ್ಮ ಹೊದೇಕಲ್ಲು ಹಾಗೂ 2022ನೇ ಸಾಲಿಗೆ ಶಿರಸಿಯ ಮಾಧವಿ ಭಂಡಾರಿಯವರು ಆಯ್ಕೆಯಾಗಿದ್ದಾರೆ.
‘ಶ್ರೀಲೇಖಾ (ಭಾಷಾಂತರ ಸಾಹಿತ್ಯ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ನಾಗರೇಖಾ ಗಾಂವ್ಕರ್ ಅವರ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ಕೃತಿ, 2022ನೇ ಸಾಲಿಗೆ ಮಾಲತಿ ಮುದಕವಿಯವರ ‘ಫಾಸಿಗೆ ಸಾಕ್ಷಿ’ ಕೃತಿಗಳು ಆಯ್ಕೆಯಾಗಿದೆ.
‘ಪ್ರೇಮಾ ಭಟ್ ಮತ್ತು ವಿ.ಎಸ್.ಭಟ್ ದತ್ತಿ (ಪ್ರಕಾಶಕಿ ಮತ್ತು ಲೇಖಕಿ) ಪ್ರಶಸ್ತಿ’ಗೆ 2020ನೇ ಸಾಲಿನಲ್ಲಿ ‘ಸಂಕ್ರಮಣ ಪ್ರಕಾಶನ ಸಂಸ್ಥೆಯ ನೀಲಾ ಪಾಟೀಲ, 2021ನೇ ಸಾಲಿಗೆ ಮಹಿಳಾ ಸಾಹಿತ್ಯಿಕ ಹುಬ್ಬಳ್ಳಿ ಪ್ರಕಾಶನದ ಹನುಮಾಕ್ಷಿ ಗೋಗಿ ಹಾಗೂ 2022ನೇ ಸಾಲಿಗೆ ಕವಿ ಪ್ರಕಾಶನದ ಡಾ. ಎಚ್.ಎಸ್. ಅನುಪಮಾ ಅವರು ಅಯ್ಕೆಯಾಗಿದ್ದಾರೆ.
ಪ್ರಶಸ್ತಿಯು ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಸಮಾರಂಭವು ದಿನಾಂಕ : 23-07-2023ರಂದು ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು ಹಾಗೂ ಮಾಜಿ ಸಚಿವೆ ರಾಣಿ ಸತೀಶ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಇದರ ಜೊತೆಗೆ ಸಂಘದ 2020ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದವರಿಗೂ ಇದೇ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು.
1 Comment
ಇದರಲ್ಲಿ 2020 ಮತ್ತು 2021ರ ಸಾಲಿನ ನಿರುಪಮಾ ಕಥಾ ಪ್ರಶಸ್ತಿ ಪಡೆದವರ ಹೆಸರಿಲ್ಲವಲ್ಲ