ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ದಾವಣಗೆರೆ ಜಿಲ್ಲೆಯ ಅತ್ತಿಗೆರೆಯ ಗ್ರಾಮೀಣ ಪ್ರದೇಶದ ಯುವ ಕವಯತ್ರಿ ಸಾಮಾಜಿಕ ಕಾಳಜಿಯ ಸೇವೆ ನವಯುವತಿಯರಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಹೊಲಿಗೆ, ಬ್ಯೂಟಿಪಾರ್ಲರ್ ತರಬೇತಿಯೊಂದಿಗೆ ಎಲ್ಲರನ್ನೂ ಬೆಳೆಸುವ ವಿಶಾಲ ಸೇವಾಮನೋಭಾವನೆಯ ಸಾಧನೆಗಳನ್ನು ಗುರುತಿಸಿ ಶ್ರೀಮತಿ ಶೈಲಜಾ ಪ್ರಶಾಂತ್‌ರವರಿಗೆ “ಕರ್ನಾಟಕ ಮುಕುಟಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಅತ್ತಿಗೆರೆ ಗ್ರಾಮದ ಗ್ರಾಮಸ್ಥರು ಸೇರಿದಂತೆ ಕಲಾಕುಂಚ ಸರ್ವ ಸದಸ್ಯರು, ಪದಾಧಿಕಾರಿಗಳು, ಶ್ರೀಮತಿ ಶೈಲಜಾ ಪ್ರಶಾಂತ್‌ರವರಿಗೆ ಅಭಿಮಾನದಿಂದ ಅಭಿನಂದಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕಲಾಕುಂಚದಿಂದ ಶ್ರೀಮತಿ ಶೈಲಜಾ ಪ್ರಶಾಂತ್ ಇವರು ‘ಕರ್ನಾಟಕ ಮುಕುಟ ಮಣಿ’ ರಾಜ್ಯ ಪ್ರಶಸ್ತಿಗೆ ಆಯ್ಕೆ
Previous Articleಸಾಗರದಲ್ಲಿ ‘ನೆನಪಿನ ರಂಗಸಂಭ್ರಮ ನಾಟಕೋತ್ಸವ’ | ಅಕ್ಟೋಬರ್ 21ರಿಂದ 27
