ಮಂಗಳೂರು : ವಿಪ್ರ ಸಮಾಗಮ ವೇದಿಕೆಯು ಆಯೋಜಿಸಿದ ‘ಕರ್ನಾಟಕ ಶಾಸ್ತ್ರೀಯ ಕಲೋತ್ಸವ’ ಕಾರ್ಯಕ್ರಮವು ದಿನಾಂಕ 19-05-2024 ರಂದು ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಗಾನ ಮಾಧುರ್ಯ ಕಾರ್ಯಕ್ರಮ ನೀಡಿದ ಸಾನ್ವಿ ರಾವ್ ಪಿ. ಮತ್ತು ಭರತನಾಟ್ಯ ಕಾರ್ಯಕ್ರಮ ನೀಡಿದ ದೀಪಾ ಪ್ರವೀಣ್ ಭಟ್ ಅವರನ್ನು ಸಮ್ಮಾನಿಸಲಾಯಿತು. ಇವರಿಗೆ ವಯಲಿನ್‌ನಲ್ಲಿ ಧನಶ್ರೀ ಶಬರಾಯ ಮತ್ತು ಮೃದಂಗದಲ್ಲಿ ಟಿ. ಆರ್. ಹರಿಕೃಷ್ಣ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ, ಸಿ. ಇ. ಓ. ಸಮೀರ್ ಪುರಾಣಿಕ್, ಟ್ರಸ್ಟೀ ಸುಧಾಕರ ರಾವ್ ಪೇಜಾವರ, ಎ. ಡಿ. ಬಿ. ಅಸೋಸಿಯೇಶನ್ ಅಧ್ಯಕ್ಷ ಪ್ರಭಾಕರ ರಾವ್ ಪೇಜಾವರ, ಸುಬ್ರಹ್ಮಣ್ಯ ರಾವ್ ಪಿ., ಶ್ರುತಿ ಸುಬ್ರಹ್ಮಣ್ಯ ರಾವ್, ಜನಾರ್ದನ ರಾವ್ ಪಿ., ಮಾಲತಿ ಜನಾರ್ದನ್, ರಮಾನಾಥ ಮಾರ್ಕೆಟಿಂಗ್ ನ ಪ್ರವೀಣ್ ಭಟ್, ರಂಜನಿ ಭಟ್, ಕಾತ್ಯಾಯಿನಿ ರಾವ್, ವಾಣಿ ಜಯರಾಂ, ಲತಾ ನಾಗರಾಜ್, ಗೀತಾ ಪ್ರಸನ್ನ, ಕೆ. ಎಲ್. ಉಪಾಧ್ಯಾಯ, ಶ್ಯಾಮ ಸುಂದರ್, ಸುಬ್ರಹ್ಮಣ್ಯ ಹೆಚ್., ಶೇಷಾದ್ರಿ ಭಟ್, ಸುಧಾಕರ ಭಟ್, ಪ್ರಕಾಶ್ ರಾವ್, ಹರೀಶ್ ರಾವ್, ರಘುರಾಮ ರಾವ್, ಎಂ. ಎಸ್. ಗುರುರಾಜ್ ಉಪಸ್ಥಿತರಿದ್ದರು.
ವೇದಿಕೆಯ ಅಧ್ಯಕ್ಷ ರಾಮಕೃಷ್ಣ ರಾವ್ ಸ್ವಾಗತಿಸಿ, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ನಿರೂಪಿಸಿ, ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ ಕಲಾವಿದರನ್ನು ಪರಿಚಯಿಸಿ, ರಮಾಮಣಿ ಭಟ್ ವಂದಿಸಿದರು.
Subscribe to Updates
Get the latest creative news from FooBar about art, design and business.
ಜನಮನ ರಂಜಿಸಿದ ವಿಪ್ರ ಸಮಾಗಮ ವೇದಿಕೆಯ ‘ಕರ್ನಾಟಕ ಶಾಸ್ತ್ರೀಯ ಕಲೋತ್ಸವ’ ಕಾರ್ಯಕ್ರಮ
No Comments1 Min Read
Previous Articleಪುತ್ತೂರಿನ ಅನುರಾಗ ವಠಾರದಲ್ಲಿ ಲೋಕರ್ಪಣೆಗೊಂಡ ‘ಶಾಂತೇಶ್ವರನ ವಚನಗಳು’
Next Article ಕಥಾಬಿಂದು ಪ್ರಕಾಶನದ ‘ಸಾಹಿತ್ಯ ಸಂಭ್ರಮ 2024’