ಬೆಂಗಳೂರು: ಸ್ನೇಹ ಪಬ್ಲಿಷಿಂಗ್ ಹೌಸ್ ಪ್ರಕಟಿಸಿರುವ ಮಹಾಮಹೋಪಾಧ್ಯಾಯ ಡಾ. ಎಸ್. ರಂಗನಾಥ್ ಅವರ ‘ಕರ್ನಾಟಕದ ಶತಾಯಿಷಿಗಳು’ ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ 25 ಜೂನ್ 2025ರ ಬುಧವಾರ ಸಂಜೆ ಘಂಟೆ 5.00ಕ್ಕೆ ನಡೆಯಲಿದೆ.
ಹಿರಿಯ ವಿದ್ವಾಂಸರು, ಭಾಷಾ ಸಮ್ಮಾನ್ ಪುರಸ್ಕೃತರೂ ಆದ ನಾಡೋಜ ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀಗಳು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರೂ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರೂ ಆದ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯನವರು ತಮ್ಮ ಘನ ಉಪಸ್ಥಿತಿಯ ಮೂಲಕ ಸಭೆಗೆ ಶೋಭೆಯನ್ನು ತರಲಿದ್ದಾರೆ. ಕಾರ್ಯಕ್ರಮದ ಆರಂಭಕ್ಕೆ ಮೊದಲು ಸಂಜೆ 4.30ಕ್ಕೆ ಹಂಸಲೇಖ ದೇಸಿ ವಿದ್ಯಾಸಂಸ್ತೆ ವಿದ್ಯಾರ್ಥಿಗಳಿಂದ ‘ಕವಿಗೀತ ಗಾಯನ’ ಕಾರ್ಯಕ್ರಮ ನಡೆಯಲಿದೆ.

