ಮುಡಿಪು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂಬಲಪಾಡಿ ವ್ಯಾಸ ಬಲ್ಲಾಳ ಜಾನಕಿ ದತ್ತಿನಿಧಿ ಉಪನ್ಯಾಸವನ್ನು ಜೂನ್ 28ರಂದು ಅಪರಾಹ್ನ 2.30 ಕ್ಕೆ ಕೊಣಾಜೆ ವಿವಿಯ ವಿಜ್ಞಾನ ಸಂಕೀರ್ಣದಲ್ಲಿರುವ ಯು.ಆರ್ ರಾವ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಸೇಡಿಯಾಪು ಕೃಷ್ಣ ಭಟ್ಟರ ಬದುಕು ಮತ್ತು ಸಾಹಿತ್ಯದ ಕುರಿತು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಡಾ.ಯು ಮಹೇಶ್ವರಿ ಉಪನ್ಯಾಸ ನೀಡಲಿದ್ದಾರೆ. ಗಾಯಕಿ ಶ್ರೀದೇವಿ ಕಲ್ಲಡ್ಕ ಸೇಡಿಯಾಪು ಕವಿತೆಗಳನ್ನು ಹಾಡಲಿದ್ದಾರೆ. ವಿವಿ ಕನ್ನಡ ವಿಭಾಗದ ಅಧ್ಯಕ್ಷ ಡಾ.ಸೋಮಣ್ಣ ಹೊಂಗಳ್ಳಿ, ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
2 Comments
ಅತ್ಯುತ್ತಮ ವಾದ ಉಪನ್ಯಾಸ.. ಅಭಿನಂದನೆಗಳು 🌹🙏
ಅತ್ಯುತ್ತಮ ವಾದ ಉಪನ್ಯಾಸ.. ಅಭಿನಂದನೆಗಳು 🌹🙏